ಏಮ್ಸ್ ಮೇಲಿನ ಸೈಬರ್ ದಾಳಿ ನಡೆದಿದ್ದು ಚೀನಾದಿಂದ ದತ್ತಾಂಶ ಈಗ ಸುರಕ್ಷಿತ: ಸರಕಾರ

Update: 2022-12-14 17:07 GMT

ಹೊಸದಿಲ್ಲಿ, ಡಿ. 14: ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ನಡೆದ ಸೈಬರ್ ದಾಳಿಯನ್ನು ಚೀನಾದಿಂದ ನಡೆಸಲಾಗಿದೆ ಎಂದು ಸರಕಾರಿ ಮೂಲಗಳು ಬುಧವಾರ ತಿಳಿಸಿವೆ. ಆಸ್ಪತ್ರೆಯ ಲಕ್ಷಾಂತರ ರೋಗಿಗಳ ವಿವರಗಳನ್ನೊಳಗೊಂಡ  ದತ್ತಾಂಶವನ್ನು ಈಗ ಸಂಪೂರ್ಣವಾಗಿ ಮರಳಿ ಪಡೆಯಲಾಗಿದೆ ಎಂಬುದಾಗಿಯೂ ಅದು ಹೇಳಿದೆ.

 ‘‘ಏಮ್ಸ್‌ನ ಕಂಪ್ಯೂಟರ್ ಸರ್ವರ್ ಮೇಲೆ ಚೀನಾದಿಂದ ದಾಳಿ ನಡೆಸಲಾಗಿದೆ ಎನ್ನುವುದು ತನಿಖೆಯಿಂದ  ತಿಳಿದುಬಂದಿದೆ. ಆಸ್ಪತ್ರೆಯಲ್ಲಿ 40 ಭೌತಿಕ ಮತ್ತು 60 ಆನ್‌ಲೈನ್, ಒಟ್ಟು 100 ಸರ್ವರ್‌ಗಳಿವೆ. ಈ ಪೈಕಿ ಐದು ಭೌತಿಕ ಸರ್ವರ್‌ಗಳ ಮೇಲೆ ದಾಳಿ ನಡೆಸಲಾಗಿತ್ತು. ಹಾನಿ ಅಗಾಧವಾಗಿರುವ ಸಾಧ್ಯತೆಯಿತ್ತು. ಆದರೆ ಈಗ ಹಾನಿಯನ್ನು ನಿಯಂತ್ರಿಸಲಾಗಿದೆ. ಐದು ಸರ್ವರ್‌ಗಳಲ್ಲಿದ್ದ ದತ್ತಾಂಶಗಳನ್ನು ಈಗ ಯಶಸ್ವಿಯಾಗಿಮರಳಿ ಪಡೆಯಲಾಗಿದೆ’’ ಎಂದು ಸರಕಾರದ ಮೂಲ ತಿಳಿಸಿದೆ.

ಮೊದಲ ದಾಳಿಯನ್ನು ನವೆಂಬರ್ 23ರಂದು ನಡೆಸಲಾಗಿತ್ತು.ಎರಡು ದಿನಗಳ ಬಳಿಕ, ದಿಲ್ಲಿ ಪೊಲೀಸ್‌ನ ಬೇಹುಗಾರಿಕಾ ಮತ್ತು ತಂತ್ರಗಾರಿಕೆ ಕಾರ್ಯಾಚರಣೆಗಳ (ಐಎಫ್‌ಎಸ್‌ಒ) ಘಟಕವು ಸುಲಿಗೆ ಮತ್ತು ಸೈಬರ್ ಭಯೋತ್ಪಾದನೆ ಮೊಕದ್ದಮೆಯನ್ನು ದಾಖಲಿಸಿಕೊಂಡಿತು.ಆದರೆ, ಆಸ್ಪತ್ರೆಯ ಕಂಪ್ಯೂಟರ್ ವ್ಯವಸ್ಥೆಯನ್ನು ಸರಿಪಡಿಸಿಕೊಡಲು ಸೈಬರ್ ಕನ್ನಗಾರರು 200 ಕೋಟಿರೂಪಾಯಿ ಒತ್ತೆ ಹಣವನ್ನು ಕ್ರಿಪ್ಟೊಕರೆನ್ಸಿರೂಪದಲ್ಲಿಕೊಡಬೇಕೆಂದು ಬೇಡಿಕೆಯಿಟ್ಟಿದ್ದಾರೆಎಂಬವರದಿಗಳನ್ನು ಪೊಲೀಸರು ನಿರಾಕರಿಸಿದ್ದಾರೆ.

ನೇಮಕಾತಿಯಿಂದ ಹಿಡಿದು ಬಿಲ್ ಮಾಡುವವರೆಗೆ ಮತ್ತು ವೈದ್ಯಕೀಯ ವರದಿಗಳನ್ನು ರೋಗಿಗಳು ನೀಡುವುದು ಮತ್ತು ಇಲಾಖೆಗಳ ನಡುವೆ ಅವುಗಳ ವರ್ಗಾವಣೆಯವರೆಗೆ, ಆಸ್ಪತ್ರೆಯ ಬಹುತೇಕ ಎಲ್ಲಾ ಸೇವೆಗಳು ಆನ್‌ಲೈನ್ ಆಗಿವೆ. ಹಾಗಾಗಿ, ಆ ಸೇವೆಗಳು ಭಾಧಿತವಾಗಿದ್ದವು. ಆನ್‌ಲೈನ್ ವ್ಯವಸ್ಥೆಯನ್ನು ಬಳಿಕ ಆಫ್‌ಲೈನ್‌ಗೆ ಪರಿವರ್ತಿಸಲಾಗಿತ್ತು ಹಾಗೂ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

Similar News