×
Ad

ಚಲಿಸುತ್ತಿರುವ ರೈಲಿನ ಫುಟ್‌ಬೋರ್ಡ್‌ನಲ್ಲಿ ಸೋನು ಸೂದ್ ಪ್ರಯಾಣ: ಮುಂಬೈ ರೈಲ್ವೇ ಪೊಲೀಸ್‌ ಪ್ರತಿಕ್ರಿಯೆ

Update: 2022-12-14 23:24 IST

ಮುಂಬೈ: ಕೊರೋನ ಬಿಕ್ಕಟ್ಟಿನ ಸಂದರ್ಭದಲ್ಲಿ ಹಲವಾರು ವಲಸೆ ಕಾರ್ಮಿಕರು ತಮ್ಮ ಊರುಗಳನ್ನು ತಲುಪಲು ಸಹಾಯ ಮಾಡಿ ದೇಶದ ಗಮನ ಸೆಳೆದಿದ್ದ ಬಹುಭಾಷಾ ನಟ ಸೋನು ಸೂದ್‌ (Sonu Sood) ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಸದ್ದು ಮಾಡಿದ್ದಾರೆ. 

ಚಲಿಸುತ್ತಿರುವ ರೈಲಿನ ಬಾಗಿಲ ಸಮೀಪ ಕುಳಿತಿರುವ ನಟ ಸೋನು ಸೂದ್‌ ಆ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಟರೊಬ್ಬರು ಅಪಾಯಕಾರಿಯಾಗಿ ರೈಲಿನ ಬಾಗಿಲ ಬಳಿ ನಿಂತಿರುವುದು ಕೆಟ್ಟ ಉದಾಹರಣೆಯಾಗುತ್ತದೆ. ಅದನ್ನು ಯಾರಾದರೂ ಅನುಕರಿಸಲು ಹೋಗಿ ಅಪಾಯ ಮಾಡಿಕೊಳ್ಳುವ ಸಾಧ್ಯತೆ ಇದೆಯೆಂದು ಹಲವು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಇದರ ಬೆನ್ನಲ್ಲೇ ಮುಂಬೈ ರೈಲ್ವೇ ಪೊಲೀಸರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಮುಂಬೈ ರೈಲ್ವೇ ಪೊಲೀಸರ ಅಧಿಕೃತ ಟ್ವಿಟರ್‌ ಖಾತೆ (grpmumbai) ಮೂಲಕ ಸೂನು ಸೂದ್‌ ವಿಡಿಯೋ ಪ್ರತಿಕ್ರಿಯೆ ನೀಡಿದ ಇಲಾಖೆ, “ಸೋನು ಸೂದ್‌ ಫುಟ್‌ಬೋರ್ಡ್‌ನಲ್ಲಿ ಪ್ರಯಾಣಿಸುವುದು ಚಲನಚಿತ್ರಗಳಲ್ಲಿ ಮನರಂಜನೆಯ ಮೂಲವಾಗಿರಬಹುದು, ನಿಜ ಜೀವನದಲ್ಲಿ ಅಲ್ಲ! ನಾವು ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸೋಣ ಮತ್ತು ಎಲ್ಲರಿಗೂ 'ಹೊಸ ವರ್ಷದ ಸಂತಸಗಳನ್ನʼ ಖಚಿತಪಡಿಸಿಕೊಳ್ಳೋಣ.” ಎಂದು ಟ್ವೀಟ್‌ ಮಾಡಿದೆ.

Similar News