ಕಾರ್ಕಳದಲ್ಲಿ ಅಪಘಾತ: ರಿಕ್ಷಾ ಚಾಲಕ ಮೃತ್ಯು, ನಾಲ್ವರಿಗೆ ಗಾಯ
Update: 2022-12-15 20:44 IST
ಕಾರ್ಕಳ, ಡಿ.15: ಬೈಕ್ ಮತ್ತು ರಿಕ್ಷಾ ಮಧ್ಯೆ ಕಾರ್ಕಳ ರಾಕ್‌ಸೈಡ್ ಬಾರ್ ಎದುರುಗಡೆ ಡಿ.14ರಂದು ರಾತ್ರಿ ವೇಳೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಚಾಲಕ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ವಿಜಯ ಬಿ. ಶೆಟ್ಟಿ (57) ಎಂದು ಗುರುತಿಸಲಾಗಿದೆ. ಈ ಅಪಘಾತ ದಲ್ಲಿ ರಿಕ್ಷಾದಲ್ಲಿದ್ದ ಮೃತರ ಮಗಳು ದೀಪಾ ವಿ. ಹಾಗೂ ಸಂಬಂಧಿ ಸೌಮ್ಯ ಶೆಟ್ಟಿ ಮತ್ತು ಅವರ ಮಗ ಆದಿತ್ಯ ಎಸ್.ಶೆಟ್ಟಿ ಹಾಗೂ ಬೈಕ್ ಸವಾರ ಗಾಯ ಗೊಂಡಿದ್ದಾರೆ.
ಬಜಗೋಳಿ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ರಿಕ್ಷಾ, ಕಾರ್ಕಳದ ಪುಲ್ಕೇರಿ ಕಡೆಯಿಂದ ಬಂದ ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು, ಚಾಲಕ ಒಮ್ಮಲೇ ಬ್ರೇಕ್ ಹಾಕಿದರು. ಇದರ ಪರಿಣಾಮ ರಿಕ್ಷಾ ನಿಯಂತ್ರಣ ತಪ್ಪಿ ಬೈಕಿಗೆ ಢಿಕ್ಕಿ ಹೊಡೆದು ಮುಗುಚಿ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯ ಗೊಂಡ ವಿಜಯ ಶೆಟ್ಟಿ ಮುಕ್ಕ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟರು.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.