×
Ad

ಮುಂಬೈ ಆಸ್ಪತ್ರೆ ಕಟ್ಟಡದಲ್ಲಿ ಅಗ್ನಿ ಅವಘಡ: ಓರ್ವ ಸಾವು, 11 ಜನರಿಗೆ ಗಾಯ

Update: 2022-12-17 22:44 IST

ಮುಂಬೈ: ನಗರದ ಘಾಟಕೋಪರ್ ಪ್ರದೇಶದ ವಿಶ್ವಾಸ್ ಕಟ್ಟಡದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಬೆಂಕಿ ಅವಘಡದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ನಾಲ್ವರು ಪೊಲೀಸರು ಸೇರಿದಂತೆ 11 ಜನರು ಗಾಯಗೊಂಡಿದ್ದಾರೆ. 

ಕಟ್ಟಡದಲ್ಲಿಯ ಪಾರಖ್ ಆಸ್ಪತ್ರೆಯಿಂದ 22 ರೋಗಿಗಳನ್ನು ತಕ್ಷಣ ಸಮೀಪದ ಆಸ್ಪತ್ರೆಯೊಂದಕ್ಕೆ ಸ್ಥಳಾಂತರಗೊಳಿಸಲಾಗಿದ್ದು, ಇವರಲ್ಲಿ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿದ್ದ ಓರ್ವ ರೋಗಿಯೂ ಸೇರಿದ್ದಾನೆ. ಕಟ್ಟಡದಲ್ಲಿಯ ಪಿಝ್ಝಾ ಸೆಂಟರ್ನಲ್ಲಿ ಬೆಂಕಿ ಆರಂಭಗೊಂಡಿತ್ತು.

ಮೃತ ವ್ಯಕ್ತಿಯನ್ನು ಕುರ್ಷಿ ದೇಧಿಯಾ ಎಂದು ಗುರುತಿಸಲಾಗಿದೆ.

ತೆರವು ಕಾರ್ಯಾಚರಣೆಯಲ್ಲಿ ನೆರವಾಗಿದ್ದ ಪೊಲೀಸ್ ಸಿಬ್ಬಂದಿಗಳನ್ನು ಹಾಗೂ ಹೊಗೆಯಿಂದ ಅಸ್ವಸ್ಥಗೊಂಡವರನ್ನು ಸಮೀಪದ ರಾಜಾವಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಮ್ಲಜನಕವನ್ನು ನೀಡಲಾಗಿದೆ ಎಂದು ತಿಳಿಸಿದ ಬೃಹನ್ಮುಂಬೈ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದರು.

ಬೆಂಕಿ ಅವಘಡ ಸಂಭವಿಸಿದ ಘಾಟಕೋಪರ್ (ಪೂರ್ವ)ದಲ್ಲಿ ಅಗ್ನಿಶಾಮಕ ಠಾಣೆಯಿಲ್ಲದ್ದರಿಂದ ಚೆಂಬೂರ ಮತ್ತು ವಿಕ್ರೋಲಿಗಳಿಂದ ಅಗ್ನಿಶಾಮಕ ದಳಗಳು ಸುಮಾರು 30 ನಿಮಿಷಗಳಷ್ಟು ವಿಳಂಬವಾಗಿ ಸ್ಥಳವನ್ನು ತಲುಪಿದ್ದವು.

Similar News