'ಪಠಾಣ್ ತುಂಬಾ ದೇಶಪ್ರೇಮಿ, ಆದರೆ...': ಅಭಿಮಾನಿಗಳ ಪ್ರಶ್ನೆಗೆ ಶಾರೂಖ್ ಖಾನ್ ಉತ್ತರ

Update: 2022-12-17 18:39 GMT

ಮುಂಬೈ: ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಿಂದಿ ಚಲನಚಿತ್ರ ನಟ ಶಾರುಖ್ ಖಾನ್ ತಮ್ಮ  ಅಭಿಮಾನಿಗಳೊಂದಿಗೆ ಸ್ವಾರಸ್ಯಕರ ಸಂವಾದ ನಡೆಸಿದ್ದಾರೆ. ಈ ವೇಳೆ, ಇತ್ತೀಚೆಗೆ ಬಲಪಂಥೀಯರಿಂದ ವಿವಾದಕ್ಕೊಳಗಾಗಿರುವ ತಮ್ಮ ಬಹುನಿರೀಕ್ಷಿತ ಚಿತ್ರ 'ಪಠಾಣ್' ಕುರಿತು ಮಾಹಿತಿ ಹಂಚಿದ್ದಾರೆ. 

 #AskSrk ಹ್ಯಾಷ್‌ಟ್ಯಾಗ್ ಮೂಲಕ Twitter ನಲ್ಲಿ  ಅಭಿಮಾನಿಗಳೊಂದಿಗೆ ವರ್ಚುವಲ್ ಸಂವಾದ ಮಾಡಿದ ಶಾರೂಖ್ , ಅಭಿಮಾನಿಗಳಲ್ಲಿ ಪ್ರಶ್ನೆಗಳನ್ನು ಕೇಳುವಂತೆ ಕೇಳಿಕೊಂಡಿದ್ದಾರೆ.
 
ಈ ವೇಳೆ, 'ಬೇಷರಂ' ಹಾಡಿಗಾಗಿ ಈಗಾಗಲೇ ಬಹಿಷ್ಕಾರದ ಬೆದರಿಕೆಯನ್ನು ಎದುರಿಸುತ್ತಿರುವ ಪಠಾಣ್ ಚಿತ್ರದ ಕುರಿತು ಹಲವು ನೆಟ್ಟಿಗರು ತಮ್ಮ ಪ್ರಶ್ನೆಗಳನ್ನು ಕೇಳಿದ್ದು, ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾರೂಖ್ 'ಪಠಾಣ್ ತುಂಬಾ ದೇಶಪ್ರೇಮಿ, ಆದರೆ ಆ್ಯಕ್ಷನ್ ರೀತಿಯಲ್ಲಿ' ಎಂದಿದ್ದಾರೆ. 
 
ಪಠಾಣ್‌ ಎಷ್ಟು ಗಳಿಸಬಹುದೆಂಬ ಪ್ರಶ್ನೆಗೆ ಉತ್ತರಿಸಿದ ಶಾರೂಖ್, "ನಾನು ಭವಿಷ್ಯ ನುಡಿಯುವ ವ್ಯವಹಾರದಲ್ಲಿಲ್ಲ... ನಾನು ನಿಮ್ಮನ್ನು ರಂಜಿಸುವ ಮತ್ತು ನಿಮ್ಮನ್ನು ನಗಿಸುವ ವ್ಯವಹಾರದಲ್ಲಿದ್ದೇನೆ..." ಎಂದು ಉತ್ತರಿಸಿದ್ದಾರೆ. 

 ‘ಪಠಾಣ್’ ಚಿತ್ರದಲ್ಲಿ ಶಾರುಖ್ ಖಾನ್ ಗೂಢಚಾರನ ಪಾತ್ರದಲ್ಲಿ ನಟಿಸುತ್ತಿದ್ದು, ಜಾನ್ ಅಬ್ರಹಾಂ ಅವರ ಎದುರಾಳಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರವು 2023 ರ ಜನವರಿ 25 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ.

Similar News