ವಿಐಪಿ ಅತಿಥಿಗಳಿಗೆ 'ವಿಶೇಷ ಸೇವೆ' ನೀಡಲು ಒತ್ತಡ: ಅಂಕಿತಾ ಹತ್ಯೆ ಪ್ರಕರಣದ ಆರೋಪಪಟ್ಟಿ ಡಿ.19ರಂದು ಸಲ್ಲಿಕೆ

ಬಿಜೆಪಿ ಮುಖಂಡನ ಪುತ್ರ ನಡೆಸುತ್ತಿದ್ದ ರೆಸಾರ್ಟ್

Update: 2022-12-18 03:18 GMT

ಡೆಹ್ರಾಡೂನ್: ಬಿಜೆಪಿ ಮುಖಂಡನ ಪುತ್ರ ನಡೆಸುತ್ತಿದ್ದ ರೆಸಾರ್ಟ್‍ನಲ್ಲಿ ರಿಸೆಪ್ಷನಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದ ಸಂಬಂಧ ತನಿಖೆ ನಡೆಸಿದ ವಿಶೇಷ ತನಿಖಾ ತಂಡ 500 ಪುಟಗಳ ಆರೋಪಪಟ್ಟಿ ಸಿದ್ಧಪಡಿಸಿದ್ದು, ಕೊತ್‍ದ್ವಾರ್ ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಸಲಿದೆ.

ಅಂಕಿತಾ ಅವರ ಸ್ನೇಹಿತ ಪುಷ್ಪ ದೀಪ್ ಅಂಕಿತಾ ಅವರ ಮೇಲೆ ವಿಐಪಿ ಅತಿಥಿಗಳಿಗೆ ವಿಶೇಷ ಸೇವೆ ಒದಗಿಸಲು ತೀವ್ರ ಒತ್ತಡವಿದ್ದ ಸಂಬಂಧ ರೆಸಾರ್ಟ್‍ನ ಮಾಜಿ ಉದ್ಯೋಗಿಯೊಬ್ಬರ ಬಳಿ ಹೇಳಿಕೊಂಡಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮಾಜಿ ಉದ್ಯೋಗಿ ರೆಸಾರ್ಟ್‍ನಲ್ಲಿ ಕೆಲ ವಾರಗಳ ಕಾಲ ಕೆಲಸ ಮಾಡಿ ರೆಸಾರ್ಟ್ ತೊರೆದಿದ್ದರು. ಪೊಲೀಸ್ ಅಧಿಕಾರಿಗಳು ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಆರೋಪಪಟ್ಟಿಯಲ್ಲಿ ಸುಮಾರು 100 ಮಂದಿ ಸಾಕ್ಷಿಗಳ ಹೇಳಿಕೆಗಳಿದ್ದು, 30 ಸಾಕ್ಷ್ಯಗಳನ್ನು ನೀಡಲಾಗಿದೆ ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮುರುಗೇಶನ್ ಹೇಳಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Similar News