ಬಿಹಾರ ಕಳ್ಳಭಟ್ಟಿ ದುರಂತದಲ್ಲಿ 200 ಕ್ಕೂ ಅಧಿಕ ಸಾವು: ಚಿರಾಗ್ ಆರೋಪ

"ನಿತೀಶ್ ಸರಕಾರ ಮೃತರ ನೈಜ ಸಂಖ್ಯೆಯನ್ನು ಮುಚ್ಚಿಹಾಕುತ್ತಿದೆ"

Update: 2022-12-18 16:36 GMT

ಹೊಸದಿಲ್ಲಿ, ಡಿ.18: ಬಿಹಾರದ ಛಾಪ್ರಾದಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತಕ್ಕೆ ಸಂಬಂಧಿಸಿ ಸಂಸದ ಹಾಗೂ ಲೋಕಜನಶಕ್ತಿ ಪಕ್ಷದ (ಎಲ್‌ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ದ ರವಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಾಪ್ರಾದಲ್ಲಿ ವಾಸ್ತವಿಕವಾಗಿ ನಕಲಿ ಮದ್ಯಸೇವಿಸಿ 200 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆಂದು ಹೇಳಿರುವ ಅವರು ನಿತೀಶ್ ಕುಮಾರ್ ಸರಕಾರವು ಈ ಸತ್ಯವನ್ನು ಬಚ್ಚಿಡುತ್ತಿದೆಯೆಂದವರು ಆರೋಪಿಸಿದರು.

‘ಛಾಪ್ರಾದಲ್ಲಿ 200 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸತ್ಯವನ್ನು ಹತ್ತಿಕ್ಕಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿಯಿಲ್ಲದೆಯೇ ಮೃತರ ಅಂತ್ಯಕ್ರಿಯೆಗಳನ್ನು ನಡೆಸಲಾಗುತ್ತಿದೆʼ ಎಂದವರು ಹೇಳಿದ್ದಾರೆ.

ಮೃತರ ಸಾವಿಗೆ ಮದ್ಯಸೇವನೆ ಕಾರಣವಲ್ಲವೆಂದು ಹೇಳುವಂತೆ ಅವರ ಕುಟುಂಬಗಳ ಮೇಲೆ ಮುಖ್ಯಮಂತ್ರಿ ನಿತೀಶ್ಕುಮಾರ್ ನೇತೃತ್ವದ ಸರಕಾರವು ಒತ್ತಡ ಹೇರುತ್ತಿದೆ. ಸತ್ಯಹೇಳಿದಲ್ಲಿ ಜೈಲಿಗೆ ಕಳುಹಿಸಲಾಗುವುದಂದು ಬೆದರಿಕೆ ಹಾಕಲಾಗುತ್ತಿದೆ ಎಂದವರು ಆರೋಪಿಸಿದರು.

Similar News