×
Ad

500 ರುಪಾಯಿಗೆ ಎಲ್‌ಪಿಜಿ ಸಿಲಿಂಡರ್‌ ವಿತರಿಸುವ ಭರವಸೆ ನೀಡಿದ ರಾಜಸ್ಥಾನ ಮುಖ್ಯಮಂತ್ರಿ

Update: 2022-12-19 19:35 IST

ಜೈಪುರ: ಬಡತನ ರೇಖೆಗಿಂತ ಕೆಳಗಿರುವ ಮತ್ತು ಉಜ್ವಲ ಯೋಜನೆಗೆ ದಾಖಲಾಗಿರುವ ಜನರಿಗೆ ರಾಜಸ್ಥಾನ ಸರ್ಕಾರ ₹ 500 ಕ್ಕೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಘೋಷಿಸಿದ್ದಾರೆ.

ಬಿಜೆಪಿಯನ್ನು ಪರೋಕ್ಷವಾಗಿ ಟೀಕಿಸುವ ಮೂಲಕ ಈ ಭರವಸೆ ನೀಡಿದ ಗೆಹ್ಲೋಟ್, ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 12 ಸಿಲಿಂಡರ್‌ಗಳನ್ನು ನೀಡುವುದಾಗಿ ಹೇಳಿದ್ದಾರೆ.

 "ನಾನು ಮುಂದಿನ ತಿಂಗಳು ಬಜೆಟ್‌ಗೆ ಸಿದ್ಧತೆ ನಡೆಸುತ್ತಿದ್ದೇನೆ... ಇದೀಗ, ನಾನು ಒಂದೇ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ಉಜ್ವಲ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಅವರು ಬಡವರಿಗೆ ಎಲ್‌ಪಿಜಿ ಸಂಪರ್ಕಗಳನ್ನು ನೀಡಿದರು ... ಆದರೆ ಸಿಲಿಂಡರ್ ಖಾಲಿಯಾಗಿದೆ, ಏಕೆಂದರೆ  (ಸಿಲಿಂಡರ್) ದರಗಳು ಈಗ ರೂ 1,040 ಆಗಿದೆ," ಎಂದು ಗೆಹ್ಲೋಟ್ ಹೇಳಿದರು.

 ಬಡವರಿಗೆ ಮತ್ತು ಉಜ್ವಲ ಯೋಜನೆಯಡಿಯಲ್ಲಿ ತಲಾ ₹ 500 ರಂತೆ ನಾವು ವರ್ಷಕ್ಕೆ 12 ಸಿಲಿಂಡರ್‌ಗಳನ್ನು ನೀಡುತ್ತೇವೆ ಎಂದು ನಾನು ಹೇಳಲು ಬಯಸುತ್ತೇನೆ ಎಂದು ಗೆಹ್ಲೋಟ್ ಹೇಳಿದರು.

Similar News