ಅಂತರ್ ರಾಷ್ಟ್ರೀಯ ಫುಟ್ಬಾಲ್‍ಗೆ ಫ್ರಾನ್ಸ್ ನ ಕರೀಮ್ ಬೆಂಝಿಮ ವಿದಾಯ
Update: 2022-12-19 22:00 IST
ಪ್ಯಾರಿಸ್: ಫ್ರಾನ್ಸ್ ಫುಟ್ಬಾಲ್ ತಂಡದ ಚಿನ್ನದ ಚೆಂಡು ವಿಜೇತ ಆಟಗಾರ ಕರೀಮ್ ಬೆಂಝಿಮ ಸೋಮವಾರ ಅಂತರ್‍ರಾಷ್ಟ್ರೀಯ ಕ್ರೀಡಾ ಬದುಕಿಗೆ ವಿದಾಯ ಕೋರಿದ್ದಾರೆ.
35 ವರ್ಷದ ಬೆಂಝಿಮ ಫ್ರಾನ್ಸ್ ಪರವಾಗಿ 97 ಪಂದ್ಯಗಳಲ್ಲಿ ಆಡಿ 37 ಗೋಲುಗಳನ್ನು ಗಳಿಸಿದ್ದಾರೆ.
ಅವರು ಈ ಬಾರಿ ಗಾಯದ ಸಮಸ್ಯೆಯಿಂದಾಗಿ ಖತರ್ ವಿಶ್ವಕಪ್‍ನಿಂದ ಅವರು ಹೊರಗುಳಿದಿದ್ದರು.
ರಿಯಲ್ ಮ್ಯಾಡ್ರಿಡ್ ಸ್ಟ್ರೈಕರ್ ಕರೀಮ್ ಬೆಂಝಿಮ ಅಕ್ಟೋಬರ್ ನಲ್ಲಿ ಮೊದಲ ಬಾರಿ ಪ್ರತಿಷ್ಠಿತ 2022 ರ ಪುರುಷರ ಬ್ಯಾಲನ್ ಡಿ'ಓರ್ ಪ್ರಶಸ್ತಿಗೆ ಭಾಜನರಾಗಿದ್ದರು. ಝೈದಾನ್ ಬಳಿಕ ಬ್ಯಾಲನ್ ಡಿ ಓರ್ ಪ್ರಶಸ್ತಿ ಗೆದ್ದ ಫ್ರಾನ್ಸ್ ನ 2ನೇ ಆಟಗಾರನೆಂಬ ಹಿರಿಮೆಗೂ ಕರೀಮ್ ಪಾತ್ರರಾಗಿದ್ದಾರೆ.