×
Ad

ಹುಟ್ಟುಹಬ್ಬ ಆಚರಿಸಿದ ಬಳಿಕ ಮೃತಪಟ್ಟ ಸ್ಥಿತಿಯಲ್ಲಿ ಕ್ಲಬ್ ಮಾಲಕ, ಮಹಿಳೆ ಪತ್ತೆ; ಇಬ್ಬರ ಸ್ಥಿತಿ ಚಿಂತಾಜನಕ

Update: 2022-12-20 10:12 IST

ಗುರುಗ್ರಾಮ್: ಗುರುಗ್ರಾಮ್‌ನ ಡಿಎಲ್‌ಎಫ್ ಹಂತ -3 ರಲ್ಲಿ ಕ್ಲಬ್‌ನ ಮಾಲಿಕರು ಹಾಗೂ  ಮಹಿಳೆಯೊಬ್ಬರು ಕ್ಲಬ್‌ನೊಳಗೆ ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. ಇನ್ನೂ ಇಬ್ಬರು ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರು ಕ್ಲಬ್ ಮಾಲಿಕನ ಜನ್ಮದಿನವನ್ನು ಅಗ್ಗಿಸ್ಟಿಕೆ ಇರುವ ಕೋಣೆಯೊಳಗೆ ಆಚರಿಸುತ್ತಿದ್ದರಿಂದ ಕೊಲೆ ಹಾಗೂ  ಆಕಸ್ಮಿಕ ಸಾವು ಸೇರಿದಂತೆ ಎಲ್ಲಾ ಕೋನಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ .

ಸಂಜೀವ್ ಜೋಶಿ ಎಂದು ಗುರುತಿಸಲಾದ ವ್ಯಕ್ತಿ ರವಿವಾರ ರಾತ್ರಿ ತನ್ನ ಹುಟ್ಟುಹಬ್ಬವನ್ನು ಆಚರಿಸಲು ಮೂವರು ಮಹಿಳೆಯರೊಂದಿಗೆ ತನ್ನ ಕ್ಲಬ್, ನೈಟ್ ರೈಡರ್‌ಗೆ ಬಂದಿದ್ದಾನೆ.

ಹುಟ್ಟು ಹಬ್ಬ ಆಚರಣೆಯ ನಂತರ, ನಾಲ್ವರು ಆಹಾರವನ್ನು ಆರ್ಡರ್ ಮಾಡಿದ್ದರು, ಅಗ್ಗಿಸ್ಟಿಕೆ ಇರುವ ಕೋಣೆಯೊಳಗೆ ಹೋಗಿ ರಾತ್ರಿಯನ್ನು ಅಲ್ಲಿಯೇ ಕಳೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ ಕ್ಲಬ್‌ನ ಸಿಬ್ಬಂದಿ ನೋಡಿದಾಗ ನಾಲ್ವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಜೋಶಿ ಹಾಗೂ  ಮೂವರು ಮಹಿಳೆಯರಲ್ಲಿ ಒಬ್ಬರು ಸಾವನ್ನಪ್ಪಿದರೆ, ಇನ್ನಿಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಅಗ್ಗಿಸ್ಟಿಕೆ ಇರುವ ಕೊಠಡಿಯೊಳಗೆ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಯ ನಂತರ ಸಾವಿನ ನಿಜವಾದ ಕಾರಣ ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿ ವಿಕಾಸ್ ಕೌಶಿಕ್ ಹೇಳಿದ್ದಾರೆ.

Similar News