ದ್ವೇಷದ ಮಾರುಕಟ್ಟೆಯಲ್ಲಿ ನನ್ನಂತೆ ಪ್ರೀತಿಯ ಅಂಗಡಿಗಳನ್ನು ತೆರೆಯಿರಿ: ಬಿಜೆಪಿಗೆ ರಾಹುಲ್ ಗಾಂಧಿ ಆಗ್ರಹ
ಹೊಸದಿಲ್ಲಿ: 'ಭಾರತ್ ಜೋಡೋ ಯಾತ್ರೆ'ಯ ಮೂಲಕ ನಾನು "ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ತೆರೆಯುತ್ತಿದ್ದೇನೆ" ಎಂದು ಹೇಳಿದ ರಾಹುಲ್ ಗಾಂಧಿ (Rahul Gandhi) ತನ್ನ ದೇಶಾದ್ಯಂತದ ಪಾದಯಾತ್ರೆಯನ್ನು ಪ್ರಶ್ನಿಸುವ ಬಿಜೆಪಿ ನಾಯಕರು ಕೂಡ ನನ್ನಂತೆಯೇ ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ತೆರೆಯಲು ಆರಂಭಿಸಲಿ ಎಂದು ಒತ್ತಾಯಿಸಿದರು.
ಯಾತ್ರೆಯ ಹಿನ್ನೆಲೆಯಲ್ಲಿ ಇಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಭಾಗಗಳು ವ್ಯಾಪ್ತಿಗೆ ಬರುವಂತೆ ಜನರ ಕುಂದುಕೊರತೆಗಳನ್ನು ನಿವಾರಿಸಲು ಸರಕಾರವು ಸಾಮಾನ್ಯ ಜನರನ್ನು ತಲುಪಲು ರಾಜಸ್ಥಾನದ ಕ್ಯಾಬಿನೆಟ್ ಪ್ರತಿ ತಿಂಗಳಿಗೊಮ್ಮೆ ಇದೇ ರೀತಿಯ ಪಾದಯಾತ್ರೆಯನ್ನು ಕೈಗೊಂಡರೆ ಉತ್ತಮವಾಗುತ್ತದೆ ಎಂದು ಸಲಹೆ ನೀಡಿದರು.
ಗೃಹ ಸಚಿವ ಅಮಿತ್ ಶಾ, ಬಿಜೆಪಿ ಮುಖ್ಯಮಂತ್ರಿಗಳು, ಸಂಸದರು ಮತ್ತು ಶಾಸಕರ ಮಕ್ಕಳು ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಕಲಿಯುತ್ತಾರೆ ಹಾಗೂ ಅವರು ಇಂಗ್ಲಿಷ್ ಭಾಷೆಯ ಬಳಕೆಯ ವಿರುದ್ಧ ಮಾತನಾಡುತ್ತಾರೆ ಎಂದು ಅವರು ಶಾಲೆಗಳಲ್ಲಿ ಇಂಗ್ಲಿಷ್ ಬಳಕೆಯನ್ನು ಟೀಕಿಸಿದ್ದಕ್ಕಾಗಿ ಬಿಜೆಪಿ ನಾಯಕರನ್ನು ಟೀಕಿಸಿದರು.
“ಯಾತ್ರೆ 100 ದಿನಗಳಿಂದ ನಡೆಯುತ್ತಿದೆ, ನಾನು ರಸ್ತೆಯಲ್ಲಿ ಸ್ನೇಹಿತರನ್ನು ಕಂಡುಕೊಂಡಿದ್ದೇನೆ. ಅವರಲ್ಲಿ ಕೆಲವರು ಬಿಜೆಪಿ ಕಚೇರಿಗಳ ಮೇಲೆ ನಿಂತಿದ್ದರು. ಮೊದಲು ನಾನು ಕೈ ಬೀಸುತ್ತೇನೆ. ಆದರೆ ಅದಕ್ಕೆ ಅವರು ಪ್ರತಿಕ್ರಿಯಿಸುವುದಿಲ್ಲ ಏಕೆಂದರೆ ಅವರಿಗೆ ಹಾಗೆ ಮಾಡಲು ಅವಕಾಶವಿಲ್ಲ. ಅವರು ಪ್ರತಿಕ್ರಿಯಿಸಲು ಬಯಸುತ್ತಾರೆ ಆದರೆ ಅದಕ್ಕೆ ಅನುಮತಿಸಲಾಗುವುದಿಲ್ಲ, ನಂತರ ನಾನು ಮತ್ತೆ ಕೈ ಬೀಸಿದಾಗ ಅವರಲ್ಲಿ ಕೆಲವರು ಅಲ್ಲಿಂದ ತೆರಳಿದರು '' ಎಂದು ರಾಹುಲ್ ಹೇಳಿದರು.