×
Ad

ಕಾಪು: ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ

Update: 2022-12-20 20:03 IST

ಕಾಪು: ಇದ್ದ ಗ್ರಾಹಕರನ್ನು ಉಳಿಸಿಕೊಂಡು ಇನ್ನಷ್ಟು ಗ್ರಾಹಕರನ್ನು ತಲುಪುವ ನಿಟ್ಟಿನಲ್ಲಿ ನಂದಿನಿ  ಸಿಹಿ ಉತ್ಸವ ಪ್ರತೀ ವರ್ಷ ಮಾಡಲಾಗುತ್ತಿದೆ. ಡಿ.18ರಿಂದ ಜ.18ವರೆಗೆ ಒಂದು ತಿಂಗಳ ಶೇ.20 ಕಡಿತದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಎಂದು ಕರ್ನಾಟಕ ರಾಜ್ಯ ಹಾಲು ಮಹಾಮಂಡಳ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಹೇಳಿದರು. 

ದಕ್ಷಿಣಕನ್ನಡ ಹಾಲು ಉತ್ಪಾದಕರ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಾಲು ಮಹಾಮಂಡಳ ಸಹಯೋಗದಲ್ಲಿ ಕಾಪುವಿನಲ್ಲಿ ನಡೆದ ಸಿಹಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ಆರಂಭದಲ್ಲಿ ನಂದಿನಿಯ ನಾಲ್ಕೈದು ಸಿಹಿ ಉತ್ಪನ್ನಗಳು ಮಾತ್ರವಿತ್ತು, ಪ್ರಸ್ತುತ ರಾಜ್ಯದಲ್ಲಿನ ವಿವಿಧೆಡೆಯ 58 ವಿಧದ ಸಿಹಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. 

ರೈತರಿಂದ ಪಡೆದ ಹಾಲು ಮಾರುಕಟ್ಟೆಗೆ ಬಂದು ಹಾಲಿನ ರೂಪದಲ್ಲಿ ಮಾರಾಟದ ಜೊತೆಗೆ ಹಾಲಿನ ಉತ್ಪನ್ನ ರೀತಿಯಲ್ಲಿ ಮಾರಾಟವಾಗುತ್ತಿರುವುದರಿಂದ  ಪೂರೈಕೆದಾರರಿಗೆ ನಿಗದಿತವಾಗಿ ದರ ನೀಡಲು ಸಾಧ್ಯವಾಗುತ್ತಿದೆ 

ಹಾಲಿನ ಉತ್ಪನ್ನದಿಂದ ಬಂದ ಹಣದಿಂದ ನೇರವಾಗಿ ರೈತರಿಗೆ ಶೇಕಡಾ 90 ಭಾಗವನ್ನು ನೀಡುವ ವ್ಯವಸ್ಥೆ ದಕ್ಷಿಣಕನ್ನಡ ಹಾಲು ಒಕ್ಕೂಟದಿಂದ ನಡೆಯುತ್ತಿದೆ. ದಿನವೊಂದಕ್ಕೆ 4,76,000 ಲೀಟರ್ ಉತ್ಪಾದನೆಯಾಗುತ್ತಿದೆ, ರಾಜ್ಯ ಹಾಲು ಮಹಾಮಂಡಳ ವ್ಯಾಪ್ತಿಯಲ್ಲಿ 15 ಹಾಲು ಉತ್ಪಾದಕರ ಒಕ್ಕೂಟಗಳಿದ್ದು, ದಿನವಹಿ 78 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. 

ಕೆಎಂಎಫ್ ಮಾರುಕಟ್ಟೆ ಪ್ರಬಂಧಕ ಡಾ. ರವಿರಾಜ ಉಡುಪ,  ಡಿಪೋ ಮ್ಯಾನೇಜರ್ ರಮೇಶ್ ಗೋದುಗಟ್ಟಿ, ಮಾರುಕಟ್ಟೆ ಅಧಿಕಾರಿಗಳಾದ ಮೋಹನ್, ಸಂದೀಪ್ ನಾಯಕ್, ಉಡುಪಿ ಮಾರುಕಟ್ಟೆ ವಿಭಾಗ ಉಪ ವ್ಯವಸ್ಥಾಪಕ ಸುಧಾಕರ್, ಮಳಿಗೆ ಮಾಲಕರಾದ ಹರೀಶ್ ನಾಯಕ್, ಕಮಲಾಕ್ಷ ನಾಯಕ್, ಪ್ರೀತಿ ನಾಯಕ್ ಉಪಸ್ಥಿತರಿದ್ದರು.

Similar News