ಭಾರತ ಜೋಡೊ ಯಾತ್ರೆ : ರಾಜಸ್ಥಾನದಲ್ಲಿ ರಾಹುಲ್ ಗಾಂಧಿ ಜೊತೆ ಸೇರಿದ ಮಾಜಿ ಪಂಜಾಬ್ ಸಿಎಂ ಚನ್ನಿ

Update: 2022-12-20 16:41 GMT

ಜೈಪುರ,ಡಿ.20: ಪಂಜಾಬಿನ ಮಾಜಿ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ (Charanjit Singh Channi)ಮತ್ತು ಪಂಜಾಬ್ ಶಾಸಕ ಸುಖ್ಜಿಂದರ್ ಸಿಂಗ್ (Sukhjinder Singh)ಅವರು ಮಂಗಳವಾರ ರಾಜಸ್ಥಾನದ ಆಲ್ವಾರ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi)ಯವರ ಭಾರತ ಜೋಡೊ ಯಾತ್ರೆಯನ್ನು ಸೇರಿಕೊಂಡರು. ರಾಜಸ್ಥಾನ ಭಾರತ ಜೋಡೊ ಮಾರ್ಗದಲ್ಲಿ ಮೊದಲ ಕಾಂಗ್ರೆಸ್ ಆಡಳಿತದ ರಾಜ್ಯವಾಗಿದ್ದು,ಯಾತ್ರೆಯು ಮಂಗಳವಾರ ರಾಜ್ಯದಲ್ಲಿ 16ನೇ ದಿನವನ್ನು ಪ್ರವೇಶಿಸಿದೆ.

ಕಳೆದ ಕೆಲವು ತಿಂಗಳುಗಳಿಂದ ವಿದೇಶದಲ್ಲಿದ್ದ ಚನ್ನಿ ಇತ್ತೀಚಿಗಷ್ಟೇ ಭಾರತಕ್ಕೆ ಮರಳಿದ್ದಾರೆ.

ಸೆ.7ರಂದು ಕನ್ಯಾಕುಮಾರಿಯಿಂದ ಆರಂಭಗೊಂಡ ಭಾರತ ಜೋಡೊ ಯಾತ್ರೆಯು ತಮಿಳುನಾಡು,ಕೇರಳ,ಕರ್ನಾಟಕ, ಆಂಧ್ರಪ್ರದೇಶ,ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳ ಮೂಲಕ ಸಾಗಿ ಈಗ ರಾಜಸ್ಥಾನದಲ್ಲಿದ್ದು,ಡಿ.24ರಂದು ದಿಲ್ಲಿಯನ್ನು ಪ್ರವೇಶಿಸಲಿದೆ. ಸುಮಾರು ಎಂಟು ದಿನಗಳ ವಿರಾಮದ ಬಳಿಕ ಉತ್ತರ ಪ್ರದೇಶ,ಹರ್ಯಾಣ,ಪಂಜಾಬ ಮೂಲಕ ಸಾಗಿ ಜಮ್ಮು-ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ.

Similar News