ಮಹಾರಾಷ್ಟ್ರ ಸರಕಾರ ಕರ್ನಾಟಕದ ಮುಖ್ಯಮಂತ್ರಿಗೆ ಅವರದೇ ಭಾಷೆಯಲ್ಲಿ ಉತ್ತರಿಸಬೇಕು:ಎನ್‌ಸಿಪಿ

Update: 2022-12-20 16:48 GMT

ಮುಂಬೈ,ಡಿ.20: ಉಭಯ ರಾಜ್ಯಗಳ ನಡುವಿನ ಗಡಿಯಲ್ಲಿನ ಉದ್ವಿಗ್ನತೆಗಳ ಕುರಿತು ಮಂಗಳವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಚರ್ಚೆಗಳ ನಡುವೆಯೇ ಎನ್‌ಸಿಪಿ ನಾಯಕ ಜಯಂತ ಪಾಟೀಲ್(Jayanta Patil) ಅವರು,ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraja Bommai)ಯವರಿಗೆ ಅವರದೇ ಭಾಷೆಯಲ್ಲಿ ಉತ್ತರಿಸಬೇಕು ಎಂದು ಹೇಳಿದರು.

ಸೋಮವಾರ ಗಡಿ ಪ್ರದೇಶಗಳಲ್ಲಿಯ ಮರಾಠಿ ಭಾಷಿಕರ ಸಭೆಯಲ್ಲಿ ಮಹಾರಾಷ್ಟ್ರದ ಯಾವುದೇ ರಾಜಕೀಯ ನಾಯಕರು ಭಾಗವಹಿಸದಂತೆ ಕರ್ನಾಟಕವು ನೋಡಿಕೊಂಡಿದೆ ಎಂದು ಹೇಳಿದ ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಪಾಟೀಲ್, ಎನ್‌ಸಿಪಿ ಶಾಸಕ ಹಾಗೂ ಮಾಜಿ ಸಚಿವ ಹಸನ್ ಮುಷ್ರಿಫ್ (Hasan Mushrif) ಅವರು ಮರಾಠಿ ಭಾಷಿಕರನ್ನು ಭೇಟಿಯಾಗಲು ಬೆಳಗಾವಿ ಜಿಲ್ಲೆಗೆ ತೆರಳಿದ್ದಾಗ ಅವರತ್ತ ಲಾಠಿಯನ್ನು ಎತ್ತಲಾಗಿತ್ತು. ಇದು ಅತ್ಯಂತ ಎಂದರು.

‘ಗಡಿ ಪ್ರದೇಶಗಳಲ್ಲಿಯ ಮರಾಠಿ ಭಾಷಿಕರ ಮೇಲೆ ಕಣ್ಗಾವಲು ಇರಿಸಲಾಗಿದೆ. ಅವರಿಗೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲಾಗುತ್ತಿದೆ. ಈ ಕುರಿತು ಉತ್ತರಗಳನ್ನು ನಾವು ಕೇಳಬೇಕು. ನಾವು ಕರ್ನಾಟಕದ ಮುಖ್ಯಮಂತ್ರಿಗಳಿಗೆ ಅವರದೇ ಭಾಷೆಯಲ್ಲಿ ಉತ್ತರಿಸಬೇಕಿದೆ’ ಎಂದ ಪಾಟೀಲ್,ಅಗತ್ಯವಾದರೆ ಕರ್ನಾಟಕಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿಯ ಅಣೆಕಟ್ಟುಗಳ ಎತ್ತರವನ್ನು ಹೆಚ್ಚಿಸಬೇಕು ಎಂದು ಹೇಳಿದರು.

ಮಹಾರಾಷ್ಟ್ರವನ್ನು ಒತ್ತೆಯಾಳಾಗಿಸುವ ಯಾವುದೇ ಪ್ರಯತ್ನಕ್ಕೆ ಅವಕಾಶ ನೀಡಬೇಡಿ ಎಂದು ಅವರು ಮುಖ್ಯಮಂತ್ರಿ ಏಕನಾಥ ಶಿಂದೆಯವರನ್ನು ಉದ್ದೇಶಿಸಿ ಹೇಳಿದರು.

Similar News