‘‘ಅತ್ಯಂತ ಕಳಪೆ’’ಗೆ ಇಳಿದ ದಿಲ್ಲಿ ವಾಯು ಗುಣಮಟ್ಟ

Update: 2022-12-20 16:58 GMT

ಹೊಸದಿಲ್ಲಿ, ಡಿ. 20:  ದಿಲ್ಲಿಯಲ್ಲಿ ವಾಯು ಗುಣಮಟ್ಟ ಮಂಗಳವಾರ ‘‘ಅತ್ಯಂತ ಕಳಪೆ’’ ಮಟ್ಟಕ್ಕೆ ಇಳಿದಿದೆ ಎಂದು ಭೂ ವಿಜ್ಞಾನಗಳ ಸಚಿವಾಲಯ ಎಸ್‌ಎಎಫ್‌ಆರ್ (ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಆ್ಯಂಡ್ ವೆದರ್ ಫೋರ್‌ಕಾಸ್ಟಿಂಗ್ ಆ್ಯಂಡ್ ರಿಸರ್ಚ್)ನ ದತ್ತಾಂಶ ಹೇಳಿದೆ. 

ಹೊಸದಿಲ್ಲಿಯಲ್ಲಿ ಅಪರಾಹ್ನ 12.20ಕ್ಕೆ ವಾಯು ಗುಣಮಟ್ಟ ಸೂಚ್ಯಂಕದಲ್ಲಿ  ಇಳಿಕೆಯಾಗಲು ಕಡಿಮೆ ತಾಪಮಾನದಿಂದಾಗಿ ಸಿಲುಕಿದ ಮಾಲಿನ್ಯಕಾರಕಗಳು ಕಾರಣವಾಗಿವೆ. ಇದರಿಂದ ನಗರದ ದೊಡ್ಡ ಭಾಗಗಳು ಭಾರೀ ಮಂಜಿನಿಂದ ತುಂಬಿಕೊಂಡಿತ್ತು ಎಂದು ಎಸ್‌ಎಎಫ್‌ಎಆರ್ ಹಂಚಿಕೊಂಡ ನೈಜ ಸಮಯದ ದತ್ತಾಂಶ ತಿಳಿಸಿದೆ. 

ವಾಯು ಗುಣಮಟ್ಟ ಸೂಚ್ಯಾಂಕ 0 ಹಾಗೂ 50ರ ನಡುವೆ ಇದ್ದರೆ ‘ಉತ್ತಮ’, 51 ಹಾಗೂ 100 ನಡುವೆ ಇದ್ದರೆ ‘ತೃಪ್ತಿಕರ’, 101 ಹಾಗೂ 200ರ ನಡುವೆ ಇದ್ದರೆ ‘‘ಮಧ್ಯಮ’’,   201 ಹಾಗೂ 300ರ ನಡುವೆ ಇದ್ದರೆ ‘‘ಕಳಪೆ’’, 301 ಹಾಗೂ 400 ನಡುವೆ ಇದ್ದರೆ ‘‘ತೀವ್ರ ಕಳಪೆ’’, 401 ಹಾಗೂ 500ರ ನಡುವೆ ಇದ್ದರೆ ‘‘ಗಂಭೀರ’’ ಎಂದು ಪರಿಗಣಿಸಲಾಗುತ್ತದೆ. 
ವಾಯು ಗುಣ ಮಟ್ಟ ಸೂಚ್ಯಂಕ ‘‘ಅತ್ಯಂತ ಕಳಪೆ’’ ಮಟ್ಟದಲ್ಲಿ ಶ್ವಾಸೋಚ್ಛಾಸದ ಸಮಸ್ಯೆಗೆ ಕಾರಣವಾಗುತ್ತದೆ. 

Similar News