×
Ad

ಇಬ್ಬರು ರಾಷ್ಟ್ರಪಿತರಿದ್ದಾರೆ ಎಂದು ಹೇಳಿ ಪ್ರಧಾನಿ ಮೋದಿಯನ್ನೂ ಸೇರಿಸಿದ ಅಮೃತಾ ಫಡ್ನವೀಸ್‌

Update: 2022-12-21 16:46 IST

 ನಾಗ್ಪುರ್: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ಅವರ ಪತ್ನಿ ಅಮೃತಾ ಫಡ್ನವೀಸ್‌ ಅವರು  ಪ್ರಧಾನಿ ನರೇಂದ್ರ ಮೋದಿಯನ್ನು ʻರಾಷ್ಟ್ರಪಿತʼ ಎಂದರಲ್ಲದೆ ನಂತರ ಮಹಾತ್ಮ ಗಾಂಧೀಜಿಗೆ ಬಳಸಲಾಗುವ ಈ ಪದದ ವ್ಯಾಖ್ಯಾನದಲ್ಲಿ ಗಾಂಧೀಜಿಯನ್ನು ಕೂಡ ಸೇರಿಸಿದ್ದಾರೆ.

ನಾಗ್ಪುರ್‌ನಲ್ಲಿ ಈ ವಾರ ಬರಹಗಾರರ ಸಂಘವೊಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಮೃತಾ ಮಾತನಾಡುತ್ತಿದ್ದರು. ಪ್ರಧಾನಿ ಮೋದಿಯನ್ನು ʼರಾಷ್ಟ್ರಪಿತʼ ಎಂದು  ಹೇಳಿರುವುದರಿಂದ ಮಹಾತ್ಮ ಗಾಂಧೀಜಿ ಅವರನ್ನು ಹೇಗೆ ಕರೆಯಬೇಕು ಎಂದು ಕೇಳಿದಾಗ ಅವರ ಉತ್ತರ ಹೀಗಿತ್ತು."ಮಹಾತ್ಮ ಗಾಂಧಿ ರಾಷ್ಟ್ರಪಿತ ಹಾಗೂ ಮೋದೀ-ಜಿ ನವಭಾರತದ ರಾಷ್ಟ್ರಪಿತ.  ಇಬ್ಬರು ರಾಷ್ಟ್ರಪಿತರಿದ್ದಾರೆ – ಒಬ್ಬರು ಈ ಯುಗದವರು ಮತ್ತು ಇನ್ನೊಬ್ಬರು ಆ ಯುಗದವರು." ಎಂದು ಹೇಳಿದರು.

2019 ರಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಲು ಟ್ವೀಟ್‌ ಮಾಡಿದ್ದ ಅಮೃತಾ ʻʻನಮ್ಮ ರಾಷ್ಟ್ರಪಿತ ನರೇಂದ್ರ ಮೋದಿಗೆ ಹುಟ್ಟುಹಬ್ಬದ ಶುಭಾಶಯಗಳು," ಎಂದು ಪೋಸ್ಟ್‌ ಮಾಡಿದ್ದರು.

Similar News