×
Ad

ಆಸ್ಕರ್‌ಗೆ ಶಾರ್ಟ್‌ಲಿಸ್ಟ್‌ ಆದ ಮೊದಲ ಭಾರತೀಯ ಹಾಡು ಎಂಬ ಖ್ಯಾತಿಗೆ ಪಾತ್ರವಾದ RRR ಸಿನೆಮಾದ ʻನಾಟು ನಾಟುʼ

Update: 2022-12-22 14:48 IST

ಹೊಸದಿಲ್ಲಿ: ಎಸ್‌ಎಸ್‌ ರಾಜಮೌಳಿ ಅವರ ಅದ್ದೂರಿ ಚಲನಚಿತ್ರ ʼಆರ್‌ಆರ್‌ಆರ್ʼ ಇದರ ಜನಪ್ರಿಯ ʻನಾಟು ನಾಟುʼ ಹಾಡು 2023 ಆಸ್ಕರ್‌ ಪ್ರಶಸ್ತಿಗೆ ಶಾರ್ಟ್‌ಲಿಸ್ಟ್‌ ಆಗಿದೆ ಹಾಗೂ ಆಸ್ಕರ್‌ಗೆ ಶಾರ್ಟ್‌ಲಿಸ್ಟ್‌ ಆದ ಮೊದಲ ಭಾರತೀಯ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆರ್‌ಆರ್‌ಆರ್‌ ಹೊರತುಪಡಿಸಿ ಗುಜರಾತಿ ಚಿತ್ರ ʻಛೆಲ್ಲೊ ಶೋʼ ಅಂತಾರಾಷ್ಟ್ರೀಯ ಫೀಚರ್‌ ಫಿಲ್ಮ್‌ ವಿಭಾಗದಲ್ಲಿ ಶಾರ್ಟ್‌ಲಿಸ್ಟ್‌ ಆಗಿದೆ.

ಅವತಾರ್:‌ ದಿ ವೇ ಆಫ್‌ ವಾಟರ್‌ ಚಿತ್ರದ ನಥಿಂಗ್‌ ಈಸ್‌ ಲಾಸ್ಟ್‌, ಟಾಪ್‌ ಗನ್: ಮಾವೆರಿಕ್‌ನ ಹೋಲ್ಡ್‌ ಮೈ ಹ್ಯಾಂಡ್‌, ಎ ಮ್ಯಾನ್‌ ಕಾಲ್ಡ್‌ ಒಟೋ ಇದರ ಟಿಲ್‌ ಯು ಆರ್‌ ಹೋಮ್‌, ವೈಟ್‌ ನಾಯ್ಸ್‌ನ ನ್ಯೂ ಬಾಡಿ ರುಂಬ ಮತ್ತು ಬ್ಲ್ಯಾಕ್‌ ಪ್ಯಾಂಥರ್:‌ ವಕಂಡ ಫೊರೆವರ್‌ ನ ಲಿಫ್ಟ್‌ ಮಿ ಅಪ್‌  ಸಹಿತ 15 ಇತರ ಹಾಡುಗಳೊಂದಿಗೆ ಆರ್‌ಆರ್‌ಆರ್‌ ಸಿನೆಮಾದ ನಾಟು ನಾಟು ಹಾಡು ಸ್ಪರ್ಧಿಸಲಿದೆ.

ಆರ್‌ಆರ್‌ಆರ್‌ ನ ಅಧಿಕೃತ ಟ್ವಿಟರ್‌ ಹ್ಯಾಂಡಲ್‌, ಚಿತ್ರದ ಹಾಡು ಆಸ್ಕರ್‌ಗೆ ಶಾರ್ಟ್‌ಲಿಸ್ಟ್‌ ಆಗಿರುವುದನ್ನು ಹೇಳಿಕೊಂಡು ಪೋಸ್ಟ್‌ ಮಾಡಿ ಚಿತ್ರದ ಒಂದು ಸ್ಟಿಲ್‌ ಪ್ರಕಟಿಸಿದೆ.

Similar News