ಹೊಸವರ್ಷದಲ್ಲಿ ಸೌದಿ ಅರೇಬಿಯಾದ ಅಲ್-ನಸ್ರ್‌ ಫುಟ್‌ಬಾಲ್‌ ಕ್ಲಬ್‌ ಗೆ ಸೇರ್ಪಡೆಗೊಳ್ಳಲಿರುವ ಕ್ರಿಸ್ಟಿಯಾನೊ ರೊನಾಲ್ಡೋ

ವರದಿ

Update: 2022-12-22 10:22 GMT

ಜಿದ್ದಾ: ಕ್ರಿಸ್ಟಿಯಾನೋ ರೊನಾಲ್ಡೊ ಅವರು ಮುಂದಿನ ವರ್ಷ ಸೌದಿ ಅರೇಬಿಯಾದ ಫುಟ್ಬಾಲ್ ಕ್ಲಬ್ ಅಲ್ ನಾಸ್ರ್‌ಗಾಗಿ ಆಡಲು ಸಿದ್ಧರಾಗಿದ್ದಾರೆ ಎಂದು ಸ್ಪ್ಯಾನಿಷ್ ಕ್ರೀಡಾ ದಿನಪತ್ರಿಕೆ ಮಾರ್ಕಾ ವರದಿ ಮಾಡಿದ್ದಾಗಿ ಖಲೀಜ್‌ ಟೈಮ್ಸ್‌ ತಿಳಿಸಿದೆ. ಸೇರ್ಪಡೆ ಪ್ರಕ್ರಿಯೆಯು ಜನವರಿ 1, 2023 ರಂದು ನಡೆಯಲಿದೆ ಎಂದು ನಿರೀಕ್ಷಿಸಲಾಗಿದ್ದು, ಮತ್ತು ಒಪ್ಪಂದಕ್ಕೆ ಸಹಿ ಮಾಡಿದ ನಂತರ, ರೊನಾಲ್ಡೊ ಜೂನ್ 2025 ರವರೆಗೆ ಕ್ಲಬ್‌ನಲ್ಲಿ ಉಳಿಯುತ್ತಾರೆ ಎಂದು ತಿಳಿದು ಬಂದಿದೆ.

ಪೋರ್ಚುಗೀಸ್ ಸ್ಟ್ರೈಕರ್ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ಜೊತೆಗಿನ ತನ್ನ ಸಂಬಂಧವನ್ನು ಕತಾರ್‌ನಲ್ಲಿ ಫಿಫಾ ವಿಶ್ವಕಪ್ ಪ್ರಾರಂಭವಾಗುವ ದಿನಗಳ ಮೊದಲು ಕೊನೆಗೊಳಿಸಿದ್ದರು. ಬಳಿಕ ಅವರು ಇನ್ನೊಂದು ತಂಡದೊಂದಿಗೆ ಮುಂದುವರಿಯಲು ಮುಕ್ತರಾಗಿದ್ದರು. ಅದೇ ಸಮಯದಲ್ಲಿ ಅಲ್ ನಸ್ರ್‌ನೊಂದಿಗೆ ಸಹಿ ಮಾಡುವ ಮಾತುಕತೆಗಳು ಪ್ರಾರಂಭವಾದವು ಎಂದು ವರದಿಯಾಗಿದೆ.

2030ರ ವಿಶ್ವಕಪ್‌ ಅನ್ನು ಸೌದಿ ಅರೇಬಿಯಾ ಆಯೋಜಿಸುವ ಹಿನ್ನೆಯಲ್ಲಿ ಈ ಪ್ರಕ್ರಿಯೆಯು ಸದ್ಯ ದೇಶಕ್ಕೆ ಮಹತ್ವದ್ದಾಗಿದೆ. ರೊನಾಲ್ಡೊ ಜೊತೆಗಿನ ಒಪ್ಪಂದವು ಸದ್ಯ ನೂರು ಮಿಲಿಯನ್‌ ಯೂರೋಗಿಂತಲೂ ಹೆಚ್ಚಿನ ಮೊತ್ತದ್ದಾಗಿದೆ ಎಂದು ತಿಳಿದು ಬಂದಿದೆ.

Similar News