ʼಮದುವೆಗೆ ಹೆಣ್ಣು ಹುಡುಕಿಕೊಡಿʼ: ವಧುಗಳಂತೆ ಸಿಂಗರಿಸಿಕೊಂಡು ಯುವಕರಿಂದ ಕಲೆಕ್ಟರ್‌ ಕಚೇರಿಗೆ ಮೆರವಣಿಗೆ !

Update: 2022-12-22 10:35 GMT

ಸೋಲಾಪುರ್:‌ ಪುರುಷ-ಸ್ತ್ರೀ ಲಿಂಗಾನುಪಾತದಲ್ಲಿ ಇರುವ ಬಹಳಷ್ಟು ವ್ಯತ್ಯಾಸದಿಂದಾಗಿ ತಮಗೆ ವಧುಗಳು ದೊರೆಯುತ್ತಿಲ್ಲ ಎಂದು ದೂರಿ ಹಲವಾರು ಅವಿವಾಹಿತ ಯುವಕರು ಮಹಾರಾಷ್ಟ್ರಾದ ಸೋಲಾಪುರ ಜಿಲ್ಲೆಯಲ್ಲಿ ʻವರರ ಮೆರವಣಿಗೆʼ ನಡೆಸಿದರಲ್ಲದೆ ಮೆರವಣಿಗೆಯಲ್ಲಿ ಜಿಲ್ಲಾ ಕಲೆಕ್ಟರ್‌ ಕಚೇರಿಗೆ ತೆರಳಿ ಜನನಪೂರ್ವ ಲಿಂಗ ಪತ್ತೆ ತಡೆ ಕಾಯಿದೆಯ ಕಟ್ಟುನಿಟ್ಟಿನ ಜಾರಿಗೆ ಆಗ್ರಹಿಸಿ ಹಾಗೂ ಮಹಾರಾಷ್ಟ್ರದಲ್ಲಿ ಪುರುಷ-ಸ್ತ್ರೀ ಲಿಂಗಾನಪುತದಲ್ಲಿರುವ ವ್ಯತ್ಯಾಸವನ್ನು ಕಡಿಮೆಗೊಳಿಸಲು ಕ್ರಮಕೈಗೊಳ್ಳಬೇಕೆಂದು ಕೋರಿ ಮನವಿ ಸಲ್ಲಿಸಿದರು.

ಈ ಮೆರವಣಿಗೆಯಲ್ಲಿ ಭಾಗವಹಿಸಿದ ಯುವಕರಿಗೆ ವಧುಗಳನ್ನು ಹುಡುಕಿಕೊಡುವಂತೆಯೂ ಮನವಿಯಲ್ಲಿ ಸರ್ಕಾರವನ್ನು ಕೋರಲಾಗಿದೆ. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರು ಮದುಮಗನ ಧಿರಿಸಿನಲ್ಲಿ ಕುದುರೆಯೇರಿ, ಬ್ಯಾಂಡುಗಳೊಂದಿಗೆ ಕಲೆಕ್ಟರ್‌ ಕಚೇರಿಗೆ ಬಂದರು.

"ಜನರು ನಮ್ಮನ್ನು ವ್ಯಂಗ್ಯವಾಡಬಹುದು, ಆದರೆ ವಿವಾಹಯೋಗ್ಯ ವಯಸ್ಸಿನ ಯುವಕರಿಗೆ ವಧುಗಳು ದೊರೆಯುತ್ತಿಲ್ಲ ಎಂಬುದು ವಾಸ್ತವ ಎಂದು ಮೆರವಣಿಗೆ ಆಯೋಜಿಸಿದ್ದ ಜ್ಯೋತಿ ಕ್ರಾಂತಿ ಪರಿಷದ್‌ ಸಂಘಟನೆಯ ಸ್ಥಾಪಕ ರಮೇಶ್‌ ಬರಸ್ಕರ್‌ ಹೇಳಿದರು. ಮಹಾರಾಷ್ಟ್ರದಲ್ಲಿ ಪ್ರತಿ 1000 ಪುರುಷರಿಗೆ 889 ಮಹಿಳೆಯರಿದ್ದಾರೆ ಎಂದು ಅವರು ಹೇಳಿದರು. ಹೆಣ್ಣು ಭ್ರೂಣ ಹತ್ಯೆಯಿಂದ ಹೀಗಾಗಿದೆ, ಇದಕ್ಕೆ ಸರ್ಕಾರ ಕಾರಣ ಎಂದು ಅವರು ಆರೋಪಿಸಿದರು.

Similar News