ಭಾರತ್ ಜೋಡೊ ಯಾತ್ರೆ ನಿಲ್ಲಿಸಲು ಸರಕಾರ ಹಲವಾರು ನೆಪಗಳನ್ನು ಹೂಡುತ್ತಿದೆ: ರಾಹುಲ್ ಗಾಂಧಿ ಆರೋಪ
ಹೊಸದಿಲ್ಲಿ: ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸಲು ಸಾಧ್ಯವಾಗದಿದ್ದರೆ ಯಾತ್ರೆಯನ್ನು ಅಮಾನತುಗೊಳಿಸುವುದಾಗಿ ಪರಿಗಣಿಸುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ರಾಹುಲ್ ಗಾಂಧಿಯವರಿಗೆ ಪತ್ರ ಬರೆದ ಕೆಲವು ದಿನಗಳ ನಂತರ "ಸರಕಾರವು ಭಾರತ್ ಜೋಡೊ ಯಾತ್ರೆಯನ್ನು ನಿಲ್ಲಿಸುವುದಕ್ಕಾಗಿ ಹಲವಾರು ನಪಗಳೊಂದಿಗೆ ಬರುತ್ತಿದೆ" ಎಂದು ರಾಹುಲ್ ಆರೋಪಿಸಿದ್ದಾರೆ.
ಸೆ.7ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ಯಾತ್ರೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಂಚರಿಸಿದೆ.
"ಈ ಯಾತ್ರೆಯು ಕಾಶ್ಮೀರಕ್ಕೆ ಹೋಗುತ್ತದೆ. ಈಗ ಅವರು ಹೊಸ ಆಲೋಚನೆಯೊಂದಿಗೆ ಬಂದಿದ್ದಾರೆ. ಅವರು ಕೋವಿಡ್ ಹರಡುತ್ತಿದೆ ಯಾತ್ರೆಯನ್ನು ನಿಲ್ಲಿಸಿ ಎಂದು ಅವರು ನನಗೆ ಪತ್ರ ಬರೆದಿದ್ದಾರೆ, " ಎಂದು ಹರಿಯಾಣದ ನುಹ್ ಜಿಲ್ಲೆಯ ಘಸೆರಾ ಗ್ರಾಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಗಾಂಧಿ ಹೇಳಿದರು.
ಅವರ ನೇತೃತ್ವದ ಭಾರತ್ ಜೋಡೋ ಯಾತ್ರೆ ಬುಧವಾರ ರಾಜಸ್ಥಾನದ ನಂತರ ನುಹ್ ಮೂಲಕ ರಾಜ್ಯವನ್ನು ಪ್ರವೇಶಿಸಿತು.
"ಈಗ, ಅವರು ಯಾತ್ರೆಯನ್ನು ನಿಲ್ಲಿಸಲು ನೆಪಗಳನ್ನು ನೀಡುತ್ತಿದ್ದಾರೆ. ಮಾಸ್ಕ್ ಧರಿಸಿ, ಯಾತ್ರೆಯನ್ನು ನಿಲ್ಲಿಸಿ, ಕೋವಿಡ್ ಹರಡುತ್ತಿದೆ" ಎಂದು ಅವರು ಹಲವು ಕಾರಣಗಳನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಕೇಂದ್ರದಲ್ಲಿ ಮತ್ತು ಹರಿಯಾಣದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಗುರಿಯಾಗಿಸಿದ
ರಾಹುಲ್ ಗಾಂಧಿ, ಅದು ಸತ್ಯಕ್ಕೆ ಹೆದರುತ್ತಿದೆ ಎಂದು ಹೇಳಿದರು.