ವಿಶ್ವದ ಅತಿ ಹೆಚ್ಚು ಆದಾಯ ಗಳಿಕೆಯ ಮಹಿಳಾ ಕ್ರೀಡಾಳುಗಳ ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಪಿ ವಿ ಸಿಂಧು

Update: 2022-12-23 10:38 GMT

ಹೊಸದಿಲ್ಲಿ: ಭಾರತದ ಬ್ಯಾಡ್ಮಿಂಟನ್‌ ತಾರೆ ಪಿ ವಿ ಸಿಂಧು ಅವರು ವಿಶ್ವದ ಅತ್ಯಂತ ಹೆಚ್ಚು ಆದಾಯ ಗಳಿಕೆಯ ಕ್ರೀಡಾಳುಗಳ ಫೋರ್ಬ್ಸ್‌ ವಾರ್ಷಿಕ ಪಟ್ಟಿಯಲ್ಲಿ ಟಾಪ್‌ 25 ರಲ್ಲಿ 12 ನೇ ಸ್ಥಾನ ಪಡೆದಿದ್ದಾರೆ. ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆಯಾಗಿರುವ ಸಿಂಧು ಟಾಪ್‌ 25 ರಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ  ಮಹಿಳಾ ಕ್ರೀಡಾಳು ಆಗಿದ್ದಾರೆ. ಈ ವರ್ಷ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್ ನಲ್ಲಿ ಸಿಂಗಲ್ಸ್‌ ಚಿನ್ನದ ಪದಕ ಹಾಗೂ ಡಬಲ್ಸ್‌ನಲ್ಲಿ ಬೆಳ್ಳಿ ಪಡೆದಿರುವ ಇಪ್ಪತ್ತೇಳು ವರ್ಷದ ಸಿಂಧು ಅವರ ಒಟ್ಟು ಆದಾಯ ಗಳಿಕೆಯಾದ 71 ಲಕ್ಷ ಡಾಲರ್‌ ಪೈಕಿ 70 ಲಕ್ಷ ಡಾಲರ್‌ ಕ್ರೀಡಾಯೇತರ ಮೂಲಗಳಿಂದ ಗಳಿಸಿದ ಆದಾಯವಾಗಿದೆ.

ಫೋರ್ಬ್ಸ್‌ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಜಪಾನಿನ ಟೆನಿಸ್‌ ತಾರೆ ನವೋಮಿ ಒಸಾಕ ಗಳಿಸಿದ್ದಾರೆ. ಸತತ ಮೂರನೇ ವರ್ಷ ಅವರು ಈ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಅತ್ಯಂತ ಹೆಚ್ಚು ಆದಾಯ ಗಳಿಕೆಯ ಕ್ರೀಡಾಳುಗಳ ಫೋರ್ಬ್ಸ್‌ ಪಟ್ಟಿಯ ಟಾಪ್‌ 10 ರಲ್ಲಿ ಗರಿಷ್ಠ ಏಳು ಮಂದಿ ಟೆನಿಸ್‌ ಆಟಗಾರರಾಗಿದ್ದಾರೆ.

ಟಾಪ್‌ ಟೆನ್‌ನಲ್ಲಿ ಸೆರೆನಾ ವಿಲಿಯಮ್ಸ್‌, ಎಮ್ಮಾ ರಡುಕನು, ಐಗಾ ಸ್ವಿಯಾಟೆಕ್‌, ವೀನಸ್‌ ವಿಲಿಯಮ್ಸ್‌, ಕೊಕೊ ಗೌಫ್‌ ಮತ್ತು ಜೆಸ್ಸಿಕಾ ಪೆಗುಲಾ ಸ್ಥಾನ ಪಡೆದಿದ್ದಾರೆ.

Similar News