ರಾಮಸೇತು ಕುರಿತು ಉಪಗ್ರಹ ಚಿತ್ರಗಳಿಂದ ನಿಖರ ಪುರಾವೆ ದೊರಕಿಲ್ಲ: ಕೇಂದ್ರ ಸರ್ಕಾರ

Update: 2022-12-23 16:01 GMT

ಹೊಸದಿಲ್ಲಿ, ಡಿ.23: ರಾಮಸೇತುವಿನ ನೈಜ ರೂಪ ಈಗಲೂ ಅಲ್ಲಿದೆಯೆಂಬುದು ಹೇಳುವುದು ಕಷ್ಟ. ಆದರೆ ಅಲ್ಲಿ ರಚನೆಯೊಂದು ಇರುವ ಬಗ್ಗೆ ಕೆಲವು ಸುಳಿವುಗಳು ದೊರೆತಿವೆ ಎಂದು ಕೇಂದ್ರ ಸರಕಾರ ಶುಕ್ರವಾರ ರಾಜ್ಯಸಭೆಗೆ ತಿಳಿಸಿದೆ.

ಹರ್ಯಾಣದ ಪಕ್ಷೇತರ ಸಂಸದ ಕಾರ್ತಿಕೇಯ ರ್ಮಾ ಅವರು ರಾಜ್ಯಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ,ಭಾರತದ ರಾಮೇಶ್ವರಂ ಹಾಗೂ ಶ್ರೀಲಂಕಾ ಮಧ್ಯದ ಸಾಗರಪ್ರದೇಶದಲ್ಲಿ ಕಂಡುಬಂದಿದೆಯೆನ್ನಲಾದ ರಾಮಸೇತು ಸಂರಚನೆಯ ಕುರಿತು ವೈಜ್ಞಾನಿಕ ಸಂಶೋಧನೆಗಳು ನಡೆದಿವೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೇಂದ್ರ ಸಚಿವ ಜೀತೆಂದ್ರ ಶರ್ಮಾ ಅವರು  ‘‘ರಾಮಸೇತುವಿನ ಬಗ್ಗೆ ಮಾಹಿತಿ ನೀಡಲು ನಮಗೆ ಕೆಲವೊಂದು ಇತಿಮಿತಿಗಳಿವೆ. ಯಾಕೆಂದರೆ ಅದೊಂದು 18 ಸಾವಿರ ವರ್ಷಗಳ ಹಿಂದಿನ ಇತಿಹಾಸವಾಗಿದೆ. ಈಗ ನಾವು ಮಾತನಾಡುತ್ತಿರುವ ಸೇತುವೆಯು 56 ಕಿ.ಮೀ. ವಿಸ್ತೀರ್ಣದ್ದಾಗಿತ್ತು ಎಂದು ಅವರು ತಿಳಿಸಿದರು.

ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ರಾಮೇಶ್ವರದ ಸಮುದ್ರ ಪ್ರದೇಶದಲ್ಲಿ ಕಲ್ಲುಗಳ ಕೆಲವು ತುಂಡುಗಳನ್ನು ಪತ್ತೆಹಚ್ಚಲಾಗಿದೆ. ನಿರಂತರವಾಗಿರುವಂತಹ ರಚನೆಗಳು ಅಲ್ಲಿವೆ. ದ್ವೀಪಗಳು ಹಾಗೂ ಸೀಮೆಸುಣ್ಣದ ಕಲ್ಲಿನ ರಚನೆಗಳು ಕಂಡುಬರುತ್ತಿವೆ. ಆದರೆ ಸರಳವಾಗಿ ಹೇಳುವುದಾದರೆ, ರಾಮಸೇತುವಿನ ನೈಜ ಸಂರಚನೆ ಅಲ್ಲಿದೆಯೆಂಬುದು ಹೇಳುವುದು ಕಷ್ಟಕರವೆಂದವರು ತಿಳಿಸಿದರು. ಆದಾಗ್ಯೂ ಅಲ್ಲಿ ಸಂರಚನೆಯು ಇರುವ ಬಗ್ಗೆ ಕೆಲವೊಂದು ಸೂಚನೆಗಳು ದೊರೆತಿವೆ ಎಂದರು.

ಕೇಂದ್ರ ಸರಕಾರವು ಪುರಾತನ ನಗರ ದ್ವಾರಕಾ ಆಗೂ ರಾಮಸೇತುವಿನಂತಹ ಪ್ರಕರಣಗಳ ಬಗ್ಗೆಯೂ ಪರಿಶೀಲನೆ ನಡೆಸಲಿದೆಯೆಂದು ಜಿತೇಂದ್ರ ಪ್ರಸಾದ್ ತಿಳಿಸಿದರು.

ಕೇಂದ್ರ ಸಚಿವರ ಈ ಹೇಳಿಕೆಯನ್ನು ಬಿಜೆಪಿ ಸರಕಾರದ ವಿರುದ್ಧ ಟೀಕಾಸ್ತ್ರವಾಗಿ ಬಳಸಿಕೊಂಡ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು, ‘‘ ಎಲ್ಲಾ ಭಕ್ತರೇ ನಿಮ್ಮ ಕಿವಿಗಳನ್ನು ಹಾಊ ಬಾಯಿಗಳನ್ನು ತೆರೆದಿಟ್ಚು ಆಲಿಸಿ. ರಾಮಸೇತುವೆ ಅಸ್ತಿತ್ವದಲ್ಲಿರುವುದಕ್ಕೆ ಯಾವುದೇ ಪುರಾವೆ ಇಲ್ಲವೆಂದು ಸಂಸತ್ನಲ್ಲಿ ಮೋದಿ ಸರಕಾರ ಹೇಳುತ್ತಿದೆ ಎಂದರು.

ಪುರಾತನ ಸಂಸೃತ ಮಹಾವ್ಯ ರಾಮಾಯಣದಲ್ಲಿ ಲಂಕೆಯನ್ನು ತಲುಪುವುದಕಾಗಿ ರಾಮಸೇತುವೆಯನ್ನು ಶ್ರೀರಾಮನು, ವಾನರ ಸೇನೆಯ ಜೊತೆಗೂಡಿ ನಿರ್ಮಿಸಿದನೆಂದು ಹೇಳಲಾಗಿದೆ.

Similar News