NDTVಗೆ ರಾಜೀನಾಮೆ ನೀಡಿದ ಸ್ಥಾಪಕರಾದ ರಾಧಿಕಾ ರಾಯ್‌ ಮತ್ತು ಪ್ರಣಯ್‌ ರಾಯ್

Update: 2022-12-23 15:15 GMT

ಹೊಸದಿಲ್ಲಿ: ಖ್ಯಾತ ಮಾಧ್ಯಮ ಎನ್ಡಿಟಿವಿ ಮಾಧ್ಯಮದ ಸ್ಥಾಪಕರಾದ ರಾಧಿಕಾ ರಾಯ್‌ ಮತ್ತು ಪ್ರಣಯ್‌ ರಾಯ್‌ ಇದೀಗ 34 ವರ್ಷಗಳ ಬಳಿಕ ಎನ್ಡಿಟಿವಿಗೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಎನ್ಡಿಟಿವಿಯಲ್ಲಿ ಅವರು ತಮ್ಮ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಎನ್ಡಿಟಿವಿಯ ಬಹುತೇಕ ಪಾಲನ್ನು ಅದಾನಿ ಸಂಸ್ಥೆ ಕೈವಶಪಡಿಸಿಕೊಂಡಿತ್ತು. ಹಿರಿಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ರವೀಶ್‌ ಕುಮಾರ್‌ ಕೂಡಾ ಸಂಸ್ಥೆಗೆ ಕೆಲ ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು.

ತಮ್ಮ ಹೇಳಿಕೆಯಲ್ಲಿ, ""ಭಾರತದಲ್ಲಿ ಪತ್ರಿಕೋದ್ಯಮವು ವಿಶ್ವ ದರ್ಜೆಯದ್ದಾಗಿದೆ. ಬೆಳೆಯಲು ಮತ್ತು ಬೆಳಗಲು ಪರಿಣಾಮಕಾರಿ ಮಾಧ್ಯಮದ ಅಗತ್ಯವಿದೆ ಎಂಬ ನಂಬಿಕೆಯಲ್ಲಿ ನಾವು 1988ರಲ್ಲಿ ಎನ್ಡಿಟಿವಿಯನ್ನು ಪ್ರಾರಂಭಿಸಿದೆವು. NDTV "ಭಾರತ ಮತ್ತು ಏಷ್ಯಾದ ಅತ್ಯಂತ ವಿಶ್ವಾಸಾರ್ಹ ಸುದ್ದಿ ಪ್ರಸಾರಕ" ಎಂದು ಗುರುತಿಸಲ್ಪಟ್ಟಿರುವುದಕ್ಕೆ ನಾವು ತುಂಬಾ ಹೆಮ್ಮೆ ಮತ್ತು ಕೃತಜ್ಞರಾಗಿರುತ್ತೇವೆ. AMG ಮೀಡಿಯಾ ನೆಟ್‌ವರ್ಕ್, ಇತ್ತೀಚಿನ ಓಪನ್ ಆಫರ್‌ನ ನಂತರ, ಈಗ NDTV ಯಲ್ಲಿ ಏಕೈಕ-ಅತಿದೊಡ್ಡ ಷೇರುದಾರರಾಗಿದ್ದಾರೆ. ಪರಿಣಾಮ, ಪರಸ್ಪರ ಒಪ್ಪಂದದೊಂದಿಗೆ ನಾವು NDTV ಯಲ್ಲಿನ ನಮ್ಮ ಹೆಚ್ಚಿನ ಷೇರುಗಳನ್ನು AMG ಮೀಡಿಯಾ ನೆಟ್‌ವರ್ಕ್‌ಗೆ ಹಿಂತಿರುಗಿಸುತ್ತಿದ್ದೇವೆ.

ಅದಾನಿ ಅವರು ನಂಬಿಕೆ, ವಿಶ್ವಾಸಾರ್ಹತೆ ಮತ್ತು ಸ್ವಾತಂತ್ರ್ಯಕ್ಕೆ ಸಮಾನಾರ್ಥಕವಾದ ಬ್ರ್ಯಾಂಡ್‌ನಲ್ಲಿ ಹೂಡಿಕೆ ಮಾಡಿದ್ದಾರೆ ಮತ್ತು ಅವರು ಈ ಮೌಲ್ಯಗಳನ್ನು ಕಾಪಾಡುತ್ತಾರೆ ಎಂದು ನಾವು ನಂಬಿದ್ದೇವೆ." ಎಂದು ತಿಳಿಸಿದ್ದಾರೆ.

Similar News