ಭಾರತದಲ್ಲಿ ಬಿಎಫ್7 ಪ್ರಭೇದ ಆತಂಕಕಾರಿಯಲ್ಲ: ಹಿರಿಯ ವಿಜ್ಞಾನಿ ರಾಕೇಶ್ ಮಿಶ್ರಾ

Update: 2022-12-23 16:14 GMT

ಹೈದರಾಬಾದ್,ಡಿ.23: ಕೊರೋನ ವೈರಸ್(Corona virus)ನ ಬಿಎಫ್7(BF 7) ಪ್ರಭೇದದ ಬಗ್ಗೆ ಹೆಚ್ಚು ಭಯಪಡುವ ಅಗತ್ಯವಿಲ್ಲವೆಂದು ಭಾರತದ ಖ್ಯಾತ ವಿಜ್ಞಾನಿ, ಟಾಟಾ ಇನ್ಸ್ಟಿಟ್ಯೂಟ್ ಫಾರ್ ಜೆನೆಟಿಕ್ಸ್ ಹಾಗೂ ಸೊಸೈಟಿ (TIGS)ಯ ನಿರ್ದೇಶಕ ರಾಕೇಶ್ ಮಿಶ್ರಾ(Rakesh Mishra) ತಿಳಿಸಿದ್ದಾರೆ. ಆದಾಗ್ಯೂ ಮಾಸ್ಕ್ ಗಳನ್ನು ಧರಿಸುವುದು ಹಾಗೂ ಅನಗತ್ಯ ಜನಸಂದಣಿಯಿಂದ ದೂರವಿರುವುದು ಹಿತಕರವೆಂದು ಅವರು ಸಲಹೆ ನೀಡಿದ್ದಾರೆ.

ಭಾರತವು ಎದುರಿಸಿದಂತೆ ಚೀನಾವು ಕೊರೋನ ವೈರಸ್ ವಿಭಿನ್ನ ಅಲೆಗಳನ್ನು ಹಾದುಹೋಗಿಲ್ಲ, ಇದರಿಂದಾಗಿ ಅಲ್ಲಿ ಕೋವಿಡ್19 ಪ್ರಕರಣಗಳಲ್ಲಿ ಅಭೂತಪೂರ್ವಏರಿಕೆಯಾಗಿದೆಯೆಂದು ಅವರು ಹೇಳಿದ್ದಾರೆ.

‘‘ಬಿಎಫ್.7’’ ಒಮಿಕ್ರಾನ್ ನ  ಉಪಪ್ರಭೇದವಾಗಿದೆ., ಕೆಲವು ಸಣ್ಣ ಬದಲಾವಣೆಗಳ ಹೊರತಾಗಿ ಅದು ಒಮಿಕ್ರಾನ್ ನಂತಹ ಪ್ರಮುಖ ಲಕ್ಷಣಗಳನ್ನು ಒಳಗೊಂಡಿದೆ. ಭಾರತೀಯರಲ್ಲಿ ಹೆಚ್ಚಿನ ಮಂದಿ, ಓಮಿಕ್ರಾನ್ ನ ಅಲೆಯನ್ನು ಹಾದುಹೋಗಿದ್ದಾರೆ. ಹೀಗಾಗಿ ನಾವು ಈ ಬಗ್ಗೆ ಆತಂಕ ಪಡಬೇಕಾಗಿಲ್ಲ’’ ಎಂದವರು ಹೇಳಿದರು,.

ಚೀನಾದ ಬಹುತೇಕ ಜನಸಂಖ್ಯೆಯು ಈ ಮೊದಲು ಪ್ರಕೃತಿ ಸಹಜವಾಗಿ ಸೋಂಕಿಗೊಳಗಾಗಿರಲಿಲ್ಲ ಹಾಗೂ ಅವರು ವಯೋವೃದ್ಧರಿಗೆ ಲಸಿಕೆ ನೀಡಿಕೆಗೆ ತಮಗೆ ದೊರೆತಿದ್ದ ಕಾಲಾವಕಾಶವನ್ನು ಬಳಸಿಕೊಳ್ಳಲಿಲ್ಲ ವೆಂದು ರಾಕೇಶ್ ಮಿಶ್ರಾ ಹೇಲಿದರು.

‘‘ಹೀಗಾಗಿ ಅವರು ಲಸಿಕೆ ಹಾಕಿಸಿಕೊಳ್ಳದೆ ಇದ್ದುದರಿಂದ ಅವರಲ್ಲಿ ಕೊರೋನ ರೋಗದ ಲಕ್ಷಣಗಳು ತೀವ್ರವಾಗಿತ್ತು. ಆದಾಗ್ಯೂ ಯುವಜನತೆಗೆ ಕೊರೋನ ಸೋಂಕಿನಿಂದ ಹೆಚ್ಚಿನ ಸಮಸ್ಯೆಯಾಗಿಲ್ಲ. ಆದರೆ ಲಸಿಕೀಕರಣಗೊಳ್ಳದ ವಯೋವೃದ್ಧರಲ್ಲಿ ಅದು ಅತ್ಯಂತ ವೇಗವಾಗಿ ಹರಡುತ್ತಿದೆ’’ ಎಂದು ರಾಕೇಶ್ ಅವರು ಚೀನಾದ ಪರಿಸ್ಥಿತಿಯ ಬಗ್ಗೆ ವಿವರಿಸಿದರು.

ಆದರೆ ಬಹುತೇಕ ಭಾರತೀಯರು ಕೋವಿಡ್ ಸೋಂಕಿನ ವಿವಿಧ ಅಲೆಗಳನ್ನು ಎದುರಿಸಿದ್ದರಿಂದ ಅವರು ಲಸಿಕೀಕರಣದಿಂದಾಗಿ ಹೈಬ್ರಿಡ್ ರೋಗನಿರೋಧಕತೆಯನ್ನು ಬೆಳೆಸಿಕೊಂಡಿದ್ದಾರೆ. ಅಲ್ಲದೆ ಪ್ರಕೃತಿದತ್ತವಾಗಿ ಕೊರೋನ ಸೋಂಕಿಗೆ ಒಳಗಾಗಿರುವುದು ಅವರನ್ನು ಕೋವಿಡ್19 ಪ್ರಭೇದಗಳಿಂದ ಸುರಕ್ಷಣೆಯನ್ನು ನೀಡುತ್ತದೆ ಎಂದರು.

Similar News