×
Ad

ಅಹಮದಾಬಾದ್‌: ಪ್ರಧಾನಿ ತಾಯಿ ಆಸ್ಪತ್ರೆಗೆ ದಾಖಲು

Update: 2022-12-28 13:47 IST

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ  ಹೀರಾಬೆನ್ ಮೋದಿ  ಅವರನ್ನು ಅಹಮದಾಬಾದ್ ಆಸ್ಪತ್ರೆಗೆ  ದಾಖಲಿಸಲಾಗಿದೆ ಎಂದು NDTV ವರದಿ ಮಾಡಿದೆ.

ಈ ವರ್ಷದ ಜೂನ್‌ನಲ್ಲಿ 99 ನೇ ವರ್ಷಕ್ಕೆ ಕಾಲಿಟ್ಟ ಹೀರಾಬೆನ್ ಮೋದಿ  ಅವರ ಆರೋಗ್ಯ ಕಳೆದ ರಾತ್ರಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಧಾನಿ ತಾಯಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಯುಎನ್ ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಹಾಗೂ ರಿಸರ್ಚ್ ಸೆಂಟರ್‌ನ ಹೇಳಿಕೆ ತಿಳಿಸಿದೆ.

ಆಸ್ಪತ್ರೆಯು ಬೇರೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಕರ್ನಾಟಕದ ಮೈಸೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ ಹಾಗೂ  ಇತರ ಕುಟುಂಬ ಸದಸ್ಯರು ಗಾಯಗೊಂಡ ಬೆನ್ನಲ್ಲೇ ಹೀರಾಬೆನ್ ಮೋದಿ ಆಸ್ಪತ್ರೆಗೆ ದಾಖಲಾದ ಸುದ್ದಿ ಬಂದಿದೆ.

Similar News