ಚಂದ್ರಬಾಬು ನಾಯ್ಡು ರ‍್ಯಾಲಿ ಸಂದರ್ಭ ಒಳಚರಂಡಿ ಕಾಲುವೆಗೆ ಬಿದ್ದು 8 ಮಂದಿ ಮೃತ್ಯು
Update: 2022-12-28 22:30 IST
ನೆಲ್ಲೂರು: ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ರ‍್ಯಾಲಿಯಲ್ಲಿ ಒಳಚರಂಡಿ ಕಾಲುವೆಗೆ ಬಿದ್ದು ಓರ್ವ ಮಹಿಳೆ ಸೇರಿದಂತೆ ಎಂಟು ಮಂದಿ ಸಾವನ್ನಪಿದ್ದಾರೆ ಎಂದು ವರದಿಯಾಗಿದೆ.
ಮಾಜಿ ಮುಖ್ಯಮಂತ್ರಿ ನಾಯ್ಡು ಅವರ ಬೆಂಗಾವಲು ಪಡೆ ಸಂಜೆ ಈ ಪ್ರದೇಶವನ್ನು ಹಾದುಹೋಗುತ್ತಿದ್ದಂತೆ ಈ ಘಟನೆ ನಡೆದಿದೆ. ನಾಯ್ಡು ಅವರ ರೋಡ್ ಶೋ ವೀಕ್ಷಿಸಲು ಸಾವಿರಾರು ಮಂದಿ ಆಗಮಿಸಿದ್ದರು. ಈ ವೇಳೆ ನೂಕು ನುಗ್ಗಲಿನಿಂದಾಗಿ ಜನರು ಆಯ ತಪ್ಪಿ ಒಳಚರಂಡಿ ಕಾಲುವೆಗೆ ಬಿದ್ದಿದ್ದರು ಎಂದು ವರದಿಯಾಗಿದೆ.
ಒಳಚರಂಡಿ ಕಾಲುವೆಗೆ ಬಿದ್ದು ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಳಿಕ ಸಭೆಯನ್ನು ರದ್ದುಪಡಿಸಿದ ನಾಯ್ಡು ಅವರು, ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.