ಒಂದು ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಸಾಕೇತ್‌ ಗೋಖಲೆಯನ್ನು ವಶಕ್ಕೆ ಪಡೆದ ಗುಜರಾತ್‌ ಪೊಲೀಸ್

Update: 2022-12-29 18:30 GMT

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ಅವರನ್ನು ಗುರುವಾರ, ಡಿಸೆಂಬರ್ 29 ರಂದು ಗುಜರಾತ್ ಪೊಲೀಸರು ಮತ್ತೊಮ್ಮೆ ಬಂಧಿಸಿದ್ದಾರೆ. ಆ ಮೂಲಕ ಕೇವಲ ಒಂದು ತಿಂಗಳ ಅವಧಿಯಲ್ಲಿ ಗುಜರಾತ್ ಪೊಲೀಸರು ಸಾಕೇತ್‌ ಗೋಖಲೆಯನ್ನು ಮೂರನೇ ಬಾರಿ ವಶಕ್ಕೆ ಪಡೆದಿದ್ದಾರೆ.

ಸಾಕೇತ್ ಗೋಖಲೆ ಅವರನ್ನು ಗುಜರಾತ್ ಪೊಲೀಸರು ದಿಲ್ಲಿಯಿಂದ ಬಂಧಿಸಿದ್ದು, ಅಹಮದಾಬಾದ್‌ಗೆ ಕರೆದೊಯ್ಯಲಾಗುತ್ತಿದೆ ಎಂದು ವರದಿಯಾಗಿದೆ.

ಚರ್ಚ್‌ ಹಾಗೂ ಮತಾಂತರ ಕುರಿತು ನಿಗಾ ವಹಿಸುವಂತೆ ಹಾಗೂ ಮಾಹಿತಿ ನೀಡುವಂತೆ ಅಸ್ಸಾಂ ಪೊಲೀಸ್ ವಿಶೇಷ ಬ್ರಾಂಚ್ ಎಸ್‌ಪಿ ರಾಜ್ಯದ ಇತರೆ ಜಿಲ್ಲೆಗಳ ಎಲ್ಲಾ ಎಸ್‌ಪಿಗಳಿಗೆ ʼರಹಸ್ಯʼ ಪತ್ರ ಬರೆದಿರುವ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿ ವ್ಯಾಟಿಕನ್‌ನ ಪವಿತ್ರ ರಾಯಭಾರ ಕಚೇರಿಗೆ ಟಿಎಂಸಿ ಪತ್ರ ಬರೆದ ಬೆನ್ನಲ್ಲೇ ಈ ಬಂಧನ ನಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಸ್ಸಾಂ ಸ್ಪೆಷಲ್‌ ಬ್ರಾಂಚ್‌ ಎಸ್‌ಪಿಯ ಈ ನಡೆಯು "ಕ್ರೈಸ್ತರ ಮೇಲೆ ಸರ್ಕಾರಿ ಪ್ರಾಯೋಜಿತ ಕಿರುಕುಳ" ಎಂದು ಟಿಎಂಸಿ ವಕ್ತಾರ ಸಾಕೇತ್‌ ಗೋಖಲೆ ಪತ್ರದಲ್ಲಿ ಹೇಳಿದ್ದರು.

ಇದನ್ನೂ ಓದಿ: ಚರ್ಚ್‌ಗಳ ಮೇಲೆ ನಿಗಾ ವಹಿಸಲು ಅಸ್ಸಾಂ ಪೊಲೀಸರ ರಹಸ್ಯ ಪತ್ರ: ಮೇಘಾಲಯದಲ್ಲಿ ರಾಜಕೀಯ ಬಿರುಗಾಳಿ

Similar News