×
Ad

ಕೊಣಾಜೆ: ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್; ಮುಹಮ್ಮದ್ ಅಪ್ಲಾ ಅಮನ್ ಶಾಫಿಗೆ ಚಿನ್ನದ ಪದಕ

Update: 2022-12-30 17:35 IST

ಕೊಣಾಜೆ: ಮಹಾರಾಷ್ಟ್ರದ ನೇತಾಜಿ ಸುಭಾಶ್ಚಂದ್ರ ಬೋಸ್ ಮಿಲಿಟರಿ ಸ್ಕೂಲ್ ಸ್ಟೇಡಿಯಂನಲ್ಲಿ ಡಿ.27 ರಂದು ನಡೆದ  ನ್ಯಾಷನಲ್ ಕರಾಟೆ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮೂಡಬಿದ್ರಿಯ ಅಲ್ ಫುರ್ಖಾನ್ ಇಸ್ಲಾಮಿಕ್  ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ  ಮೊಹಮ್ಮದ್ ಅಪ್ಲಾ ಅಮನ್ ಶಾಫಿ ಅವರು 13 ವರ್ಷ ವಯೋಮಿತಿಯ 55 ಕೆಜಿ ಕುಮಿಟೆ ವಿಭಾಗ ದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾನೆ.

ಈ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ  ಭಾರತ ಸೇರಿದಂತೆ ನೇಪಾಳ, ಭೂತನ್, ಶ್ರೀಲಂಕಾ, ಬಾಂಗ್ಲಾದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಇವರು ರೆನ್ಸಿ ಮಹಮ್ಮದ್ ನದೀಮ್ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ. ಮುಹಮ್ಮದ್ ಅಪ್ಲಾ ಅಮನ್ ಶಾಫಿ ಕೊಣಾಜೆಯ ಅಲ್ ಅಮೀನ್ ಹಾಗೂ ರೆಹನಾ ದಂಪತಿಯ ಪುತ್ರನಾಗಿದ್ದಾನೆ.

Similar News