ಪಿಎಫ್‌ಐಗೆ ಉಗ್ರ ಶಿಬಿರಗಳನ್ನು ಆಯೋಜಿಸುತ್ತಿದ್ದ ಆರೋಪ: 11 ಮಂದಿಯ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಎನ್‌ಐಎ

Update: 2022-12-30 12:45 GMT

ಹೊಸದಿಲ್ಲಿ: ಉಗ್ರ ತರಬೇತಿ ಶಿಬಿರಗಳನ್ನು ಆಯೋಜಿಸಿದ ಹಾಗೂ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ನಡೆಸಿದ ಉಗ್ರವಾದಿ ಕೃತ್ಯಗಳಿಗೆ ಜನರನ್ನು ನಿಯೋಜಿಸಿದ ಆರೋಪ ಹೊರಿಸಿ 11 ಮಂದಿಯ ವಿರುದ್ಧ ರಾಷ್ಟ್ರೀಯ ತನಿಖಾ ಏಜನ್ಸಿ ಹೈದರಾಬಾದ್‌ನ ನ್ಯಾಯಾಲಯದಲ್ಲಿ ಚಾರ್ಜ್‌ ಶೀಟ್‌ ಸಲ್ಲಿಸಿದೆ ಎಂದು scroll.in ವರದಿ ಮಾಡಿದೆ.

ತೆಲಂಗಾಣದ ನಿಝಾಮಾಬಾದ್‌ ಜಿಲ್ಲೆಯಲ್ಲಿ ಪಿಎಫ್‌ಐನ ಸ್ಲೀಪರ್‌ ಸೆಲ್‌ ಒಂದನ್ನು ಪೊಲೀಸರು ಪತ್ತೆ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಈ ಚಾರ್ಜ್‌ ಶೀಟ್‌ ಸಲ್ಲಿಸಲಾಗಿದೆ.

ಜುಲೈ 4ರಂದು ನಿಝಾಮಾಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೆ ನಂತರ ಆಗಸ್ಟ್‌ 26 ರಂದು ಎನ್‌ಐಎ ತನಿಖೆ ಕೈಗೆತ್ತಿಕೊಂಡಿತ್ತು.

ಆರೋಪಿಗಳು ಭಾರತ ಸರಕಾರ, ಇತರ ಸಂಸ್ಥೆಗಳು ಮತ್ತು ವ್ಯಕ್ತಿಗಳ ಕುರಿತಂತೆ ದ್ವೇಷಪೂರಿತ ಮಾತುಗಳ ಮೂಲಕ ಮುಸ್ಲಿಂ ಯುವಕರನ್ನು ಪಿಎಫ್‌ಐಗೆ ಸೇರಿಸುತ್ತಿದ್ದರು ಎಂದು ಎನ್‌ಐಎ ಆರೋಪಿಸಿದೆ. ಒಮ್ಮೆ ಈ ಯುವಕರು ಪಿಎಫ್‌ಐಗೆ ಸೇರ್ಪಡೆಗೊಂಡ ನಂತರ ಯೋಗ ಮತ್ತು ದೈಹಿಕ ಶಿಕ್ಷಣ ತರಗತಿಗಳ ನೆಪದಲ್ಲಿ ಅವರನ್ನು ತರಬೇತಿ ಶಿಬಿರಗಳಿಗೆ ಕಳುಹಿಸಲಾಗುತ್ತಿತ್ತು ಎಂದೂ ಎನ್‌ಐಎ ತನ್ನ ಚಾರ್ಚ್‌ಶೀಟ್‌ನಲ್ಲಿ ಆರೋಪಿಸಿದೆ.

Similar News