×
Ad

‌ ʻಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳಿ': ಪ್ರಧಾನಿ ಮೋದಿಗೆ ಮಮತಾ ಬ್ಯಾನರ್ಜಿ ಸಲಹೆ

Update: 2022-12-30 18:20 IST

ಕೊಲ್ಕತ್ತಾ : ಇಂದು ತಮ್ಮ ತಾಯಿ ಹಿರಾಬೆನ್‌ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ಕೆಲವೇ ಕ್ಷಣಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಹೌರಾ ನಿಲ್ದಾಣದಿಂದ ಸಿಲಿಗುರಿ ತನಕ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಚಾಲನೆ ಕಾರ್ಯಕ್ರಮದಲ್ಲಿ ವೀಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದ ಸಲಹೆಯೊಂದು ಬಂದಿದೆ.

"ದಯವಿಟ್ಟು ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳಿ. ನಿಮ್ಮ ತಾಯಿಯ ನಿಧನಕ್ಕೆ ಹೇಗೆ ಸಂತಾಪ ಸೂಚಿಸಬೇಕೆಂದು ತಿಳಿಯುತ್ತಿಲ್ಲ, ನಿಮ್ಮ ತಾಯಿ ನಮ್ಮ ತಾಯಿಯೂ ಹೌದು. ನನಗೆ ನನ್ನ ತಾಯಿ ನೆನಪಾಗುತ್ತಾರೆ," ಎಂದು ಪ್ರಧಾನಿಯನ್ನುದ್ದೇಶಿಸಿ ಮಮತಾ ಹೇಳಿದರು.

"ಇಂದು ನಿಮಗೆ ವೈಯಕ್ತಿಕವಾಗಿ ದುಃಖದ ದಿನ. ಇದು  ನಿಮಗೆ ದೊಡ್ಡ ನಷ್ಟ. ದೇವರು ನಿಮಗೆ ಈ ನೋವನ್ನು ಸಹಿಸುವ ಶಕ್ತಿ ನೀಡಲಿ. ತಾಯಿಯ ನಿಧನದಿಂದಾಗಿ ಈ ಕಾರ್ಯಕ್ರಮಕ್ಕೆ ಖುದ್ದಾಗಿ ಹಾಜರಾಗಲು ಸಾಧ್ಯವಾಗದೇ ಇದ್ದರೂ ವರ್ಚುವಲ್‌ ಆಗಿ ಹಾಜರಿದ್ದುದಕ್ಕೆ ಧನ್ಯವಾದಗಳು. ದಯವಿಟ್ಟು ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳಿ," ಎಂದು ಮಮತಾ ಬ್ಯಾನರ್ಜಿ ಹೇಳಿದರು.

ಮಮತಾ ಅವರ ಭಾಷಣ ಮುಗಿದ ನಂತರ ಪ್ರಧಾನಿ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು.

Similar News