ಕಾರ್ಕಳ | ಕೆ.ಎಸ್ ಹೆಗ್ಡೆಯವರ ಚಿಂತನೆ ಡಾ. ವಿನಯ್ ಹೆಗ್ಡೆ ಮುಂದುವರೆಸಿರುವುದು ಶ್ಲಾಘನೀಯ: ಪ್ರೋ ಜಿ. ಆರ್ ರೈ

Update: 2022-12-30 16:36 GMT

ಕಾರ್ಕಳ:  ಕೆ.ಎಸ್ ಹೆಗ್ಡೆಯವರ  ಶೈಕ್ಷಣಿಕ ಚಿಂತನೆ ಹಾಗು ದೂರದೃಷ್ಟಿಯನ್ನು ಡಾ. ವಿನಯ್ ಹೆಗ್ಡೆ ಯವರು ಮುಂದುವರೆಸಿ ಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು‌ ನಿಟ್ಟೆ ತಾಂತ್ರಿಕ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೋ ಜಿ. ಆರ್ ರೈ ಹೇಳಿದರು

ಅವರು   ನಿಟ್ಟೆ ತಾಂತ್ರಿಕ ಕಾಲೇಜಿನ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ನಿಟ್ಟೆ ಸಣ್ಣ ಹಳ್ಳಿಯನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡುವ ಮೂಲಕ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ ಎಂದರು

ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ  ನಿರ್ವಹಣೆ ಹಾಗು ಅಭಿವೃದ್ಧಿಯ ನಿರ್ದೇಶಕ ಯೋಗೀಶ್ ಹೆಗ್ಡೆ  ಮಾತನಾಡಿ ಶಿಕ್ಷಣದೊಂದಿಗೆ ಕ್ರೀಡಾ ಕ್ಷೇತ್ರದಲ್ಲೂ ಈ ತಾಂತ್ರಿಕ ಕಾಲೇಜು ಉತ್ತಮ ಸಾಧನೆ ಮಾಡುತ್ತಾ ಬಂದಿದೆ. ಗ್ರಾಮೀಣ ಪ್ರದೇಶದ ಲ್ಲಿ ಸ್ಥಾಪಿಸಿ ಬೆಳೆಸುವಲ್ಲಿ ಶ್ರಮ ವಹಿಸಿದ ಎಲ್ಲರನ್ನೂ ನಾವು ನೆನೆಯುವುದು ಅತ್ಯಗತ್ಯವಾಗಿದೆ ಎಂದರು.

 ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ  ಸಹಕುಲಪತಿ   ಡಾ . ಎಂ ಎಸ್ ಮೂಡಿತ್ತಾಯ   ಮಾತನಾಡಿದರು.

 ವೇದಿಕೆಯಲ್ಲಿ ಹಳೆ ವಿದ್ಯಾರ್ಥಿಗಳಾದ   ಪ್ರತಿಭಾ ಉರ್ವಲರ್ , ಫ್ರಾನ್ಸಿಸ್ ಸೆಬಾಸ್ಟಿಯನ್, ಸ್ಯಾಮ್ ಜಾರ್ಜ್  ಉಪಸ್ಥಿತರಿದ್ದರು

 ನಿಟ್ಟೆ ತಾಂತ್ರಿಕ ಕಾಲೇಜಿನ ಉಪ ಪ್ರಾಂಶುಪಾಲ ಐ.ಆರ್ ಮಿತ್ತಾಂತಾಯ  ಸ್ವಾಗತಿಸಿ, ಪ್ರಾಸ್ತಪಿಸಿದರು. ಹಳೆ ವಿದ್ಯಾರ್ಥಿ ಸಂಘ ವಿನಮಿತದ ಅಧ್ಯಕ್ಷೆ ಪ್ರಭಾ ನಿರಂಜನ್ ವಂದಿಸಿದರು .ಕಾಲೇಜು ವಿದ್ಯಾರ್ಥಿ ತೇಜಸ್ ಬಾಳಿಗ ಕಾರ್ಯಕ್ರಮ ನಿರೂಪಿಸಿದರು

Similar News