ದಿಲ್ಲಿಯಲ್ಲಿ ರೆಸ್ಟೋರೆಂಟ್ ಗಳು ಮತ್ತು ಬಾರ್‌ಗಳು ಇನ್ನು ಮುಂದೆ ದಿನದ 24 ಗಂಟೆಯೂ ಓಪನ್!

Update: 2022-12-31 15:56 GMT

ಹೊಸದಿಲ್ಲಿ,ಡಿ.31: ಹೋಟೆಲ್ ಉದ್ಯಮಕ್ಕೆ ಹೊಸ ವರ್ಷದ ಕೊಡುಗೆಯಾಗಿ ಮೇಲ್ದರ್ಜೆಯ ಹೋಟೆಲ್‌ಗಳಲ್ಲಿಯ ರೆಸ್ಟೋರಂಟ್‌ಗಳು ಮತ್ತು ಬಾರ್‌ಗಳನ್ನು ವಾರದ ಏಳೂ ದಿನಗಳ ಕಾಲ ದಿನದ 24 ಗಂಟೆ ತೆರೆದಿಡಲು ಅವಕಾಶವನ್ನು ನೀಡಲಾಗಿದೆ.

ಚತುರ್ತಾರಾ ಮತ್ತು ಪಂಚತಾರಾ ಹೋಟೆಲ್‌ಗಳಲ್ಲಿ ರೆಸ್ಟೋರಂಟ್‌ಗಳು ಮತ್ತು ಬಾರ್‌ಗಳು ದಿನದ 24 ಗಂಟೆಗಳು ತೆರೆದುಕೊಂಡಿರಲಿವೆ. ವಿಮಾನ ನಿಲ್ದಾಣ,ರೈಲ್ವೆ ನಿಲ್ದಾಣಗಳು ಮತ್ತು ಅಂತರರಾಜ್ಯ ಬಸ್ ನಿಲ್ದಾಣದೊಳಗಿನ ಹೋಟೆಲ್‌ಗಳೂ 24 ಗಂಟೆ ಕಾರ್ಯಾಚರಿಸಬಹುದು. ತ್ರಿತಾರಾ ಹೋಟೆಲ್‌ಗಳಲ್ಲಿ ರೆಸ್ಟೋರಂಟ್‌ಗಳನ್ನು ನಸುಕಿನ ಎರಡು ಗಂಟೆಯವರೆಗೆ ಮತ್ತು ಉಳಿದವನ್ನು ನಸುಕಿನ ಒಂದು ಗಂಟೆಯವರೆಗೆ ತೆರೆದಿಡಬಹುದುಎಂದು ಅಧಿಕಾರಿಗಳು ತಿಳಿಸಿದರು.

Similar News