×
Ad

ಬಾಡಿಗೆ ಮನೆಯಲ್ಲಿ ಮಹಿಳೆ ಶವವಾಗಿ ಪತ್ತೆ, ಜೊತೆಗಿದ್ದ ಸಂಗಾತಿ ನಾಪತ್ತೆ: ದಿಲ್ಲಿ ಪೊಲೀಸರು

Update: 2023-01-02 10:09 IST

ಹೊಸದಿಲ್ಲಿ: ರೋಹಿಣಿ ಪ್ರದೇಶದಲ್ಲಿ 36 ವರ್ಷದ ಮಹಿಳೆಯೊಬ್ಬರು ತಮ್ಮ ಬಾಡಿಗೆ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

ಮಹಿಳೆ ತನ್ನ ಲಿವ್-ಇನ್ ಪಾರ್ಟ್ನರ್  ಜೊತೆ ಮನೆಯಲ್ಲಿ ವಾಸಿಸುತ್ತಿದ್ದಳು ಎಂದು ಅವರು ಹೇಳಿದರು.

ಮಂಗೋಲ್‌ಪುರ ಕಲಾನ್ ಗ್ರಾಮದ ಕಟ್ಟಡದ ಎರಡನೇ ಮಹಡಿಯಲ್ಲಿ ಮಹಿಳೆಯೊಬ್ಬರು ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು  ಶುಕ್ರವಾರ ರೋಹಿಣಿ ದಕ್ಷಿಣ ಪೊಲೀಸ್ ಠಾಣೆಗೆ ಮಾಹಿತಿ ಪಡೆದಿದ್ದು, ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದರು ಎಂದು ಅವರು ಹೇಳಿದರು.

ಮಹಿಳೆ ಉತ್ತರ ಪ್ರದೇಶದ ಆಗ್ರಾ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ವಿಚಾರಣೆಯಲ್ಲಿ ಮಹಿಳೆಯು  ಆಗ್ರಾ ಮೂಲದ ವ್ಯಕ್ತಿಯೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದಳು ಎಂದು ತಿಳಿದುಬಂದಿದೆ.

 ಗುರುವಾರ ಸಂಜೆ 6.30ರ ಸುಮಾರಿಗೆ ಇಬ್ಬರನ್ನು ಕೊನೆಯದಾಗಿ ನೋಡಿದ್ದಾಗಿ ಮನೆ ಮಾಲಕರು ತಿಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ 10.30 ರ ಸುಮಾರಿಗೆ ಮನೆ ಮಾಲಕರು ಎರಡನೇ ಮಹಡಿಗೆ ಬಂದಾಗ, ಮಹಿಳೆಯ ಕೋಣೆಯ ಬಾಗಿಲು ಭಾಗಶಃ ತೆರೆದಿದ್ದು ಮಹಿಳೆ ಮೃತಪಟ್ಟಿದ್ದನ್ನು ಕಂಡು ಅಧಿಕಾರಿಗಳಿಗೆ ತಿಳಿಸಿದರು.

Similar News