×
Ad

ನೋಟುಗಳ ನಿಷೇಧ 'ಕಾನೂನುಬಾಹಿರ': ವಿಭಿನ್ನ ತೀರ್ಪು ಕೊಟ್ಟ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ.ವಿ.ನಾಗರತ್ನ

Update: 2023-01-02 12:08 IST

ನೋಟುಗಳ ನಿಷೇಧ 'ಕಾನೂನುಬಾಹಿರ': ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ.ವಿ.ನಾಗರತ್ನ

ಹೊಸದಿಲ್ಲಿ: ನೋಟು ನಿಷೇಧ ಕುರಿತ ಸರಕಾರದ ಅಧಿಸೂಚನೆಯು ಕಾನೂನುಬಾಹಿರವಾಗಿದೆ ಹಾಗೂ  ನೋಟು ನಿಷೇಧ ಪ್ರಕ್ರಿಯೆಯನ್ನು ಕೇಂದ್ರವು ಆರಂಭಿಸಬಾರದಿತ್ತು ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ  justice BV Nagarathna ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠವು 4:1 ಬಹುಮತದೊಂದಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನೋಟು ನಿಷೇಧ ನಿರ್ಧಾರ ಎತ್ತಿಹಿಡಿದ ಸಂದರ್ಭದಲ್ಲಿ ಜಸ್ಟಿಸ್ ನಾಗರತ್ನ  ತಮ್ಮ ತೀವ್ರ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

 ನವೆಂಬರ್ 8, 2016 ರ ಕೇಂದ್ರದ ಅಧಿಸೂಚನೆಯನ್ನು "ಕಾನೂನುಬಾಹಿರ" ಎಂದು ಕರೆದ ಜಸ್ಟಿಸ್ ನಾಗರತ್ನ  "ನನ್ನ ಅಭಿಪ್ರಾಯದಲ್ಲಿ ನವೆಂಬರ್ 8 ರ ಅಧಿಸೂಚನೆಯ ಮೂಲಕ ನೋಟು ಅಮಾನ್ಯೀಕರಣದ ಕ್ರಮವು ಕಾನೂನುಬಾಹಿರವಾಗಿದೆ. ಆದರೆ 2016 ರಲ್ಲಿದ್ದ ಯಥಾಸ್ಥಿತಿಯನ್ನು ಈಗ ಪುನಃಸ್ಥಾಪಿಸಲು ಸಾಧ್ಯವಿಲ್ಲ. ನೋಟು ನಿಷೇಧ ಕಾನೂನು ವಿರುದ್ದವಾಗಿ ಚಲಾಯಿಸಿದ ಅಧಿಕಾರ. ಹೀಗಾಗಿ ಅದು ಕಾನೂನು ಬಾಹಿರ. ಅದನ್ನು ಜಾರಿಗೊಳಿಸಿದ ರೀತಿ ಕಾನೂನಿಗೆ ಅನುಸಾರವಾಗಿಲ್ಲ'' ಎಂದು ಹೇಳಿದರು.

"ಆರ್‌ಬಿಐ ಕಾಯಿದೆಯ ಪ್ರಕಾರ, ನೋಟು ಅಮಾನ್ಯೀಕರಣದ ಶಿಫಾರಸು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಂಡಳಿಯಿಂದ ಸ್ವತಂತ್ರವಾಗಿ ಬರಬೇಕು" ಎನ್ನುವುದು ಅರ್ಜಿದಾರರ ವಾದದ ತಿರುಳು.  ಆದರೆ ಈ ಪ್ರಕರಣದಲ್ಲಿ ಕೇಂದ್ರವು ನವೆಂಬರ್ 7 ರಂದು ಆರ್‌ಬಿಐಗೆ ಪತ್ರ ಬರೆದು ಅಂತಹ ಶಿಫಾರಸಿಗೆ ಸಲಹೆ ನೀಡಿತು ಎಂದರು.

Similar News