×
Ad

ರಿಷಭ್ ಪಂತ್ ಅಪಘಾತ ವಿಷಯವನ್ನು ತಡವಾಗಿ ತಿಳಿದು ಆಘಾತಗೊಂಡ ಇಶಾನ್ ಕಿಶನ್; ವಿಡಿಯೋ ವೈರಲ್

Update: 2023-01-02 17:08 IST

ಹೊಸದಿಲ್ಲಿ: ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಅವರು ಅಪಘಾತಕ್ಕೀಡಾಗಿರುವ ಸಂಗತಿ ತಡವಾಗಿ ತಿಳಿದು ಅವರ ಸಹ ಆಟಗಾರ ಇಶಾನ್ ಕಿಶನ್ (Ishan Kishan) ಆಘಾತಗೊಂಡ ವಿಡಿಯೋ ವೈರಲ್ ಆಗಿದೆ. ರಣಜಿ (Ranji) ಪಂದ್ಯದಲ್ಲಿ ಝಾರ್ಖಂಡ್ ತಂಡದ ಪರವಾಗಿ ಆಟವಾಡುವಾಗ ಕ್ರಿಕೆಟ್ ಅಭಿಮಾನಿಯೊಬ್ಬರು ಈ ವಿಷಯವನ್ನು ಅವರ ಗಮನಕ್ಕೆ ತಂದಾಗಲಷ್ಟೇ ರಿಷಭ್ ಪಂತ್ ಅಪಘಾತದಲ್ಲಿ ಗಾಯಗೊಂಡಿರುವ ಸಂಗತಿ ಅವರಿಗೆ ತಿಳಿದು ಬಂದಿದೆ.

ರಣಜಿ ಪಂದ್ಯಗಳಲ್ಲಿ ಜಾರ್ಖಂಡ್ ತಂಡದ ಪರ ಬಿಡುವಿಲ್ಲದೆ ತೊಡಗಿಕೊಂಡಿರುವ ಇಶಾನ್ ಕಿಶನ್, ಅಭಿಮಾನಿಗಳೊಂದಿಗೆ ಛಾಯಾಚಿತ್ರಗಳಿಗೆ ಕಾಣಿಸಿಕೊಳ್ಳುವಾಗ ಓರ್ವ ಅಭಿಮಾನಿ ಪಂತ್ ಅಪಘಾತಕ್ಕೀಡಾಗಿರುವ ಕುರಿತು ಮಾಹಿತಿ ನೀಡಿದ್ದಾನೆ. ಕೂಡಲೇ "ಏನು?" ಎಂದು ಇಶಾನ್ ಕಿಶನ್ ಆಘಾತದಿಂದ ಆತನನ್ನು ಪ್ರಶ್ನಿಸಿದ್ದಾರೆ.

ಸುದ್ದಿ ತಿಳಿದು ಆಘಾತಗೊಂಡ ಇಶಾನ್ ಕಿಶನ್‌ ರಿಗೆ ಕ್ರಿಕೆಟ್ ಅಭಿಮಾನಿಗಳು, ಅಪಘಾತದ ಬಗ್ಗೆ ತೀರಾ ತಲೆ ಕೆಡಿಸಿಕೊಳ್ಳದೆ ಆಡಬೇಕಿರುವ ಪಂದ್ಯದ ಕಡೆ ಗಮನ ಹರಿಸಲು ಸಲಹೆ ನೀಡುವುದು ವಿಡಿಯೋದಲ್ಲಿ ದಾಖಲಾಗಿದೆ.

ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಭ್ ಪಂತ್ ಅಪಾಯದಿಂದ ಪಾರಾಗಿದ್ದಾರೆ ಎಂಬ ಸಂಗತಿ ದೃಢಪಟ್ಟಿದ್ದರೂ, ಅವರು ಚೇತರಿಸಿಕೊಂಡು ಮೈದಾನಕ್ಕೆ ಮರಳಲು ಕನಿಷ್ಠ 4-6 ತಿಂಗಳು ಹಿಡಿಯಬಹುದೆಂದು ಎಂದು ವರದಿಯಾಗಿದೆ.

ಇದನ್ನೂ ಓದಿ: ವಿದೇಶಿಗರು ಎರಡು ವರ್ಷಗಳ ಕಾಲ ಮನೆ ಖರೀದಿಸದಂತೆ ನಿಷೇಧ ಹೇರಿದ ಕೆನಡಾ: ಕಾರಣವೇನು ಗೊತ್ತೇ?

Similar News