×
Ad

ಉಡುಪಿ: ಅಖಿಲ ಭಾರತ ಅಂತರ ವಿವಿ ವಾಲಿಬಾಲ್‌ಗೆ ಚಾಲನೆ ನೀಡಿದ ಅದಮಾರುಶ್ರೀ

Update: 2023-01-04 21:50 IST

ಉಡುಪಿ: ಮಂಗಳೂರು ವಿಶ್ವವಿದ್ಯಾಲಯ, ಪೂರ್ಣಪ್ರಜ್ಞ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರಗಳ ಜಂಟಿ ಆಶ್ರಯದಲ್ಲಿ 2022-23ನೇ ಸಾಲಿನ ಅಖಿಲ ಭಾರತ ಅಂತರ ವಲಯ ವಿಶ್ವವಿದ್ಯಾಲಯ ಮಟ್ಟದ ಪುರುಷರ ವಾಲಿಬಾಲ್ ಚಾಂಪಿಯನ್‌ ಶಿಪ್ ಗೆ ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿರುವ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಬಳಿಕ ವಾಲಿಬಾಲ್ ಕೋರ್ಟ್‌ಗೆ ತೆರಳಿದ ಸ್ವಾಮೀಜಿ ಸರ್ವ್ ಮಾಡುವ ಮೂಲಕ ಸಾಂಕೇತಿಕವಾಗಿ ಪಂದ್ಯಾಟವನ್ನು ಉದ್ಘಾಟಿಸಿದರು.

ಹಾಲಿ ರನ್ನರ್ ಅಪ್ ಹರಿಯಾಣದ ಕುರುಕ್ಷೇತ್ರ ವಿವಿ ಹಾಗೂ ಕೊಲ್ಕೋತ್ತದ ಅದಮಾಸ್ ವಿವಿ ತಂಡಗಳ ನಡುವೆ ನಡೆದ ಟೂರ್ನಿಯ ಮೊದಲ ವಾಲಿಬಾಲ್ ಪಂದ್ಯವನ್ನು ಸಂಪೂರ್ಣವಾಗಿ ವೀಕ್ಷಿಸಿ ಸ್ಪರ್ಧಾಳುಗಳನ್ನು ಹುರಿದುಂಬಿಸಿದರು. 

ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ಕಾಲೇಜಿನ ಗೌರವ ಕಾರ್ಯದರ್ಶಿ  ಡಾ. ಜಿ.ಎಸ್. ಚಂದ್ರಶೇಖರ್, ಸಂಸ್ಥೆಯ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಎ, ಕ್ರೀಡಾಕೂಟದ ಸಂಯೋಜಕರಾದ ಸುಕುಮಾರ್ ಉಪಸ್ಥಿತರಿದ್ದರು.

Similar News