ಗಾಝಿಯಾಬಾದ್: ನಾಪತ್ತೆಯಾಗಿದ್ದ ಇಬ್ಬರು ಯುವಕರು 4 ದಿನಗಳ ನಂತರ ಶವವಾಗಿ ಪತ್ತೆ
Update: 2023-01-05 12:44 IST
ಗಾಝಿಯಾಬಾದ್: ಡಿಸೆಂಬರ್ 31 ರಿಂದ ನಾಪತ್ತೆಯಾಗಿದ್ದ ಗಾಝಿಯಾಬಾದ್‌ನ ಇಬ್ಬರು ಯುವಕರು ನಿನ್ನೆ ಸಂಜೆ ಮುಖದಲ್ಲಿ ಆ್ಯಸಿಡ್ ಗಾಯದ ಗುರುತುಗಳೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
25ರ ಹರೆಯದ ಗೌರವ್ ಹಾಗೂ ದುರ್ಗೇಶ್ ಅವರ ಕುಟುಂಬಗಳು ಆ ಪ್ರದೇಶದ ಕೆಮಿಕಲ್ ಫ್ಯಾಕ್ಟರಿಯೊಂದರ ಸಿಬ್ಬಂದಿ ಹಾಗೂ ಮಾಲಕರೇ ಈ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಪ್ರದೇಶದಲ್ಲಿ ಮಾಲಿನ್ಯವನ್ನು ಉಂಟು ಮಾಡಿದ್ದ ಕಾರ್ಖಾನೆಯನ್ನು ಮುಚ್ಚಲು ಪ್ರಯತ್ನಿಸುತ್ತಿದ್ದರಿಂದ ಇಬ್ಬರೂ ಹತ್ಯೆಗೀಡಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇಬ್ಬರ ಮುಖಗಳು ಆ್ಯಸಿಡ್‌ನಿಂದ ವಿರೂಪಗೊಂಡಿದ್ದರಿಂದ ಅವರನ್ನು ಗುರುತಿಸಲಾಗಲಿಲ್ಲ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.