ಚಿತ್ರೀಕರಣದ ವೇಳೆ ಅವಘಡ: ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಆಸ್ಪತ್ರೆಗೆ ದಾಖಲು

Update: 2023-01-07 12:05 GMT

ಹೈದರಾಬಾದ್:‌ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರು ತಮ್ಮ ಮುಂಬರುವ ವೆಬ್ ಸಿರೀಸ್ ಇಂಡಿಯನ್ ಪೊಲೀಸ್ ಫೋರ್ಸ್‌ನ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ. ಹೈದರಾಬಾದ್ ನಗರದ ಹೊರವಲಯದಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣದ ವೇಳೆ ಶೆಟ್ಟಿ ಕೈಗೆ ಗಾಯವಾಗಿದೆ. ಅವರನ್ನು ಕಾಮಿನೇನಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಅವರಿಗೆ ಸಣ್ಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸೆಟ್ ನಲ್ಲಿ ಮತ್ತೆ ಶೂಟಿಂಗ್ ಆರಂಭಿಸಿದ್ದಾರೆ.

  ಮೂಲಗಳ ಪ್ರಕಾರ, ಕಾರ್ ಚೇಸ್ ಸೀಕ್ವೆನ್ಸ್ ಚಿತ್ರೀಕರಣದ ವೇಳೆ ರೋಹಿತ್ ಶೆಟ್ಟಿ ಅವರ ಬೆರಳುಗಳಿಗೆ ಗಾಯವಾಗಿದೆ. ನಿರ್ಮಾಣ ತಂಡ ತಕ್ಷಣವೇ ಅವರನ್ನು ಹೈದರಾಬಾದ್‌ನ ಕಾಮಿನೇನಿ ಆಸ್ಪತ್ರೆಗೆ ಕರೆತಂದಿದೆ. ವೈದ್ಯರ ತಂಡವು ಅವರಿಗೆ ಸಣ್ಣ ಶಸ್ತ್ರಚಿಕಿತ್ಸೆ ನಡೆಸಿತು ಮತ್ತು ಘಟನೆಯ ನಂತರ ಅವರು ಸೆಟ್ ನಲ್ಲಿ ಕೆಲಸವನ್ನು ಪುನರಾರಂಭಿಸಿದ್ದಾರೆ.

  

Similar News