2021-22ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಟಿಎಂಸಿಗೆ ಶೇ.96ಕ್ಕೂ ಅಧಿಕ ಆದಾಯ: ಆಡಿಟ್ ವರದಿ

Update: 2023-01-07 15:09 GMT

ಕೋಲ್ಕತಾ,ಜ.7: ತೃಣಮೂಲ ಕಾಂಗ್ರೆಸ್(TMC)ನ ವಾರ್ಷಿಕ ಲೆಕ್ಕಪರಿಶೋಧನೆ ವರದಿಯಂತೆ 2021-22ರಲ್ಲಿ ಪಕ್ಷದ ಶೇ.96ಕ್ಕೂ ಅಧಿಕ ಆದಾಯವು ಚುನಾವಣಾ ಬಾಂಡ್ ಗಳ ಮೂಲಕ ಬಂದಿದೆ. 2020-21ರಲ್ಲಿ 42 ಕೋ.ರೂ.ಗಳಿದ್ದ ಚುನಾವಣಾ ಬಾಂಡ್ ಗಳ ಮೂಲಕ ಆದಾಯವು 2021-22ರಲ್ಲಿ 528.14 ಕೋ.ರೂ.ಗೇರಿದೆ ಎನ್ನುವುದನ್ನೂ ಆಡಿಟ್ ವರದಿಯು ತೋರಿಸಿದೆ.

2021-22ರಲ್ಲಿ ಟಿಎಂಸಿಯ 545.74 ಕೋ.ರೂ.ಗಳ ಒಟ್ಟು ಆದಾಯದಲ್ಲಿ 528.14 ಕೋ.ರೂ.ಚುನಾವಣಾ ಬಾಂಡ್ ಗಳ ಮೂಲಕ ಮತ್ತು 14.36 ಕೋ.ರೂ.ಪಕ್ಷದ ಪ್ರಾಥಮಿಕ ಸದಸ್ಯರಿಂದ ಶುಲ್ಕಗಳು/ವಂತಿಗೆಗಳು ಇತ್ಯಾದಿಗಳಿಂದ ಬಂದಿದೆ. 2021-22ರಲ್ಲಿ ಪ.ಬಂಗಾಳ ವಿಧಾನಸಭಾ ಚುನಾವಣೆಗಳಲ್ಲಿ ಟಿಎಂಸಿ ಗೆದ್ದ ಬಳಿಕ ಪಕ್ಷದ ವೆಚ್ಚಗಳೂ ಏರಿವೆ.

2020-21ರಲ್ಲಿ ಪಕ್ಷದ ವೆಚ್ಚವು 135.52 ಕೋ.ರೂ.ಗಳಾಗಿದ್ದರೆ 2021-22ರಲ್ಲಿ ಅದು 268.33 ಕೋ.ರೂ.ಗೇರಿದೆ ಎಂದು ಶುಕ್ರವಾರ ಬಿಡುಗಡೆಗೊಳಿಸಿದ ವರದಿಯು ತಿಳಿಸಿದೆ.ಟಿಎಂಸಿ ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ.

Similar News