×
Ad

ಅಖಿಲ ಭಾರತ ಅಂತರ್ ವಿವಿ ವಾಲಿಬಾಲ್ ಚಾಂಪಿಯನ್ ಶಿಪ್: ಮಂಗಳೂರು ವಿವಿಗೆ ಸೆಮಿಫೈನಲ್ ನಲ್ಲಿ ಸೋಲು

Update: 2023-01-08 13:06 IST

ಉಡುಪಿ, ಜ.8: ಇಲ್ಲಿನ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ವಾಲಿಬಾಲ್ ಚಾಂಪಿಯನ್ ಶಿಪ್‌ನಲ್ಲಿ ಇಲ್ಲನ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ವಾಲಿಬಾಲ್ ಚಾಂಪಿಯನ್ ಶಿಪ್‌ನ ಎರಡನೇ ಸೆಮಿಫೈನಲ್‌ ಪಂದ್ಯಾಟದಲ್ಲಿ ಆತಿಥೇಯ ಮಂಗಳೂರು ವಿವಿ ತಂಡ ಪರಾಭವಗೊಂಡಿದೆ.

ಚೆನ್ನೈ ನ ಬಲಿಷ್ಠ ಎಸ್ಆರ್‌ಎಂ ವಿವಿ ತಂಡವು ಮಂಗಳೂರು ವಿವಿಯನ್ನು 3-0 ನೇರ ಸೆಟ್‌ಗಳ ಅಂತರದಿಂದ 25-22, 25-22, 25-20ರಿಂದ ಪರಾಭಗೊಳಿಸಿತು.

ಇಂದು ಅಪರಾಹ್ನ ಮೂರನೇ ಸ್ಥಾನಕ್ಕೆ ನಡೆಯಲಿರುವ ಪಂದ್ಯದಲ್ಲಿ ಮಂಗಳೂರು ವಿವಿಯು ಕಲ್ಲಿಕೋಟೆ ವಿವಿಯನ್ನು ಎದುರಿಸಲಿದೆ ಸಂಜೆ ನಡೆಯುವ ಫೈನಲ್‌ನಲ್ಲಿ ಎಸ್ಆರ್‌ಎಂ ವಿವಿ ಕುರುಕ್ಷೇತ್ರ ವಿವಿ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.

Similar News