×
Ad

ಮಂಗಳೂರು: ಜಿಪಿಎಲ್ ಉತ್ಸವ - 2023; ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿ

Update: 2023-01-08 17:49 IST

ಮಂಗಳೂರು: ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಬಹುನಿರೀಕ್ಷಿತ ಜಿಪಿಎಲ್ ಉತ್ಸವ - 2023,  ಇದರ ಆಮಂತ್ರಣ ಪತ್ರಿಕೆಯನ್ನು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರು ಮಂಗಳೂರಿನಲ್ಲಿ ಶನಿವಾರ ಬಿಡುಗಡೆಗೊಳಿಸಿದರು.

ಇದೇ ಸಂದರ್ಭದಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕರೂ, ಜಿಪಿಎಲ್ ಉತ್ಸವದ  ಪ್ರಮುಖ ಪ್ರತಿನಿಧಿಗಳಾದ ವೇದವ್ಯಾಸ ಕಾಮತ್ ಅವರು ಫೆಬ್ರವರಿ 10, 11, 12 ರಂದು ಅಡ್ಯಾರ್ ನ ಸಹ್ಯಾದ್ರಿ ಇಂಜಿನಿ ಯರಿಂಗ್ ಕಾಲೇಜಿನ   ಕ್ರೀಡಾಂಗಣದಲ್ಲಿ ನಡೆಯುವ ಜಿಪಿಎಲ್ ಉತ್ಸವಕ್ಕೆ ಧೋನಿಯವರನ್ನು ಆಮಂತ್ರಿಸಿದರು. ಜಿಪಿಎಲ್ ಟ್ರೋಫಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಧೋನಿಯವರು ಭಾಗವಹಿಸುವ ಭರವಸೆಯನ್ನು ನೀಡಿದರು. 

ಈ ಸಂದರ್ಭದಲ್ಲಿ ವೇದವ್ಯಾಸ ಕಾಮತ್ ಅವರೊಂದಿಗೆ ಜಿಪಿಎಲ್ ಉತ್ಸವದ ಆಯೋಜಕರಾದ ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್, ಕೊಂಚಾಡಿ ಗುರುಪ್ರಸಾದ್ ಕಾಮತ್, ಕಾನೆಂಗಾಡ್ ಗುರುಪ್ರಸಾದ್ ಕಾಮತ್ ಉಪಸ್ಥಿತರಿದ್ದರು.

7ನೇ ವರ್ಷದ ಜಿಪಿಎಲ್ ಉತ್ಸವ- 2023 ಈ ಬಾರಿಯೂ ವಿಶೇಷ ಹಬ್ಬದಂತೆ ಆಯೋಜಿಸಲಾಗುತ್ತಿದ್ದು, ಕ್ರಿಕೆಟ್ ಪಂದ್ಯಾಟಗಳೊಂದಿಗೆ ಹೆಲಿಕಾಪ್ಟರ್ ರೌಂಡ್, ಬೋಟಿಂಗ್, ಕಿಡ್ಸ್ ಝೋನ್, ಮೂರು ಮುತ್ತು ತಂಡದಿಂದ ನಾಟಕ ಪ್ರದರ್ಶನ, ಬೊಂಬೆಯಾಟ, ವಾಯ್ಸ್ ಆಫ್ ಜಿಎಸ್ ಬಿ ಅಡಿಶನ್, ವಿವಿಧ ಮನೋರಂಜನಾ ಕಾರ್ಯ ಕ್ರಮ, ಫುಡ್ ಕೋರ್ಟ್ ಸಹಿತ ಹಲವಾರು ಆಕರ್ಷಣೆಗಳನ್ನು ಒಳಗೊಂಡಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Similar News