ಪ್ರಧಾನಿ ಮೋದಿ ಇಂದೋರ್ ಭೇಟಿಗೂ ಮುನ್ನ ಪಾದಚಾರಿ ಮಾರ್ಗಕ್ಕೆ ʼತಿರಂಗದ ಬಣ್ಣʼ: ಜನರಿಂದ ಭಾರೀ ಆಕ್ರೋಶ

Update: 2023-01-09 09:19 GMT

ಭೋಪಾಲ್ : 17 ನೇ ಪ್ರವಾಸಿ ಭಾರತೀಯ ದಿವಸ್‌ನ ಉದ್ಘಾಟನೆಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಮಧ್ಯಪ್ರದೇಶದ ಇಂದೋರ್ ನಗರ ಸಜ್ಜಾಗಿದೆ. ಆದಾಗ್ಯೂ, ಹೂಡಿಕೆದಾರರು ಹಾಗೂ  ಎನ್‌ಆರ್‌ಐ ಶೃಂಗಸಭೆಯ ಪೂರ್ವ ಸಿದ್ಧತೆಗಳನ್ನು ವಿವರಿಸುವ ವೀಡಿಯೊವೊಂದು  ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಈ ವೀಡಿಯೊ ನೋಡಿದವರಿಗೆ ಭಾರೀ  ಆಘಾತವನ್ನು ಉಂಟು ಮಾಡಿದೆ.  ಪಾದಚಾರಿ ಮಾರ್ಗವೊಂದಕ್ಕೆ ತ್ರಿವರ್ಣ ಬಳಿದಿರುವುದು ಈ ವೀಡಿಯೊದಲ್ಲಿ ಕಂಡುಬಂದಿದೆ. ಜನರು ಈ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಸ್ಥಳೀಯಾಡಳಿತ ಹಾಗೂ ಮಧ್ಯಪ್ರದೇಶದ ಸರಕಾರದ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ.

 ಇದು ತ್ರಿವರ್ಣ ಧ್ವಜಕ್ಕೆ ಅವಮಾನವೆಂದು ಎಂದು  ಪಾದಚಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಅದೇ ವೀಡಿಯೊದಲ್ಲಿದೆ. 

ಪಾದಚಾರಿ ಮಾರ್ಗಕ್ಕೆ  ತಿರಂಗದ ಬಣ್ಣ ಬಳಿಯಲಾಗಿದೆ. ಅದು ಅಶೋಕ ಚಕ್ರವನ್ನು ಹೊಂದಿರದ ಕಾರಣ ಭಾರತೀಯ ಧ್ವಜವನ್ನು ಪ್ರತಿನಿಧಿಸುವುದಿಲ್ಲ. ಅಪಮಾನದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕೆಲವರು ವಾದಿಸಿದ್ದಾರೆ.

ಇದೇ ವೀಡಿಯೊವನ್ನು ತೆಲಂಗಾಣದ ಟಿಆರ್ ಎಸ್ ಮುಖಂಡರೂ ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ತಿರಂಗಕ್ಕೆ ದೇಶಕ್ಕೆ ಮಾಡಿದ ಅಪಮಾನವಲ್ಲವೇ ಎಂದು ಪ್ರಶ್ನಿಸಿದ್ದಾರೆ.

Similar News