ಅಪಘಾತ, ದೌರ್ಜನ್ಯ ವರದಿಗಳ ಕುರಿತು ಟಿವಿ ಚಾನೆಲ್‌ ಗಳಿಗೆ ಎಚ್ಚರಿಕೆ ನೀಡಿದ ಕೇಂದ್ರ ಸಚಿವಾಲಯ

Update: 2023-01-09 14:26 GMT

ಹೊಸದಿಲ್ಲಿ: ಅಪಘಾತಗಳು, ಸಾವುಗಳು, ಮಹಿಳೆಯರು, ಮಕ್ಕಳು ಮತ್ತು ಹಿರಿಯ ವಿರುದ್ಧದ ದೌರ್ಜನ್ಯ ಮತ್ತು ಹಿಂಸೆ ಘಟನೆಗಳ ವರದಿ ಮಾಡುವಿಕೆ ವೇಳೆ "ಉತ್ತಮ ಅಭಿರುಚಿ ಮತ್ತು ಸಭ್ಯತೆ" ಕುರಿತಂತೆ ರಾಜಿ ಮಾಡಿಕೊಳ್ಳುವುದರ ವಿರುದ್ಧ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಖಾಸಗಿ ಉಪಗ್ರಹ ಚಾನೆಲ್‌ಗಳಿಗೆ ಎಚ್ಚರಿಕೆ ನೀಡಿದೆ.

ಹಲವಾರು ಚಾನಲ್‌ಗಳು ಇಂತಹ ಘಟನೆಗಳ ವರದಿ ಮಾಡುವ ರೀತಿಗೆ ತನ್ನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವಾಲಯದ ಸುತ್ತೋಲೆಯೊಂದು, ವರದಿ ಮಾಡುವ ರೀತಿ ವೀಕ್ಷಕರ ಕಣ್ಣುಗಳಿಗೆ ಮತ್ತು ಕಿವಿಗಳಿಗೆ ಅರಗಿಸಿಕೊಳ್ಳಲಾಗದ ರೀತಿಯಲ್ಲಿವೆ ಎಂದು ಹೇಳಿದೆ.

ದಿ ಕೇಬಲ್‌ ಟೆಲಿವಿಷನ್‌ ನೆಟ್ವರ್ಕ್ಸ್‌ (ನಿಯಂತ್ರಣ) ಕಾಯಿದೆ, 1995 ಇದರ ಕಾರ್ಯಕ್ರಮ ಸಂಹಿತೆಗೆ ಎಲ್ಲಾ ಟಿವಿ ವಾಹಿನಿಗಳು ಬದ್ಧವಾಗಿರಬೇಕು ಎಂದು ಸಚಿವಾಲಯ ಹೇಳಿದೆ.

ಗಾಯಾಳುಗಳು ರಕ್ತದ ಮಡುವಿನಲ್ಲಿರುವ ಹಾಗೂ ಜನರನ್ನು ನಿರ್ದಯವಾಗಿ ಥಳಿಸುತ್ತಿರುವ ಚಿತ್ರಗಳನ್ನು ಟಿವಿ ವಾಹಿನಿಗಳು ಪ್ರಸಾರ ಮಾಡುತ್ತಿವೆ. ಇವು ಮನಸ್ಸಿಗೆ ಅಹಿತಕರವಾಗಿವೆ ಹಾಗೂ ಸಭ್ಯತೆಯ ಸಂಹಿತೆಯನ್ನು ಮೀರುತ್ತವೆ ಎಂದು ಸಚಿವಾಲಯ ಹೇಳಿದೆ.

Similar News