ಈ ಬಾರಿ ಹಜ್‌ ಯಾತ್ರಾರ್ಥಿಗಳ ಸಂಖ್ಯೆಗೆ ಮಿತಿ ಹೇರಲಾಗುವುದಿಲ್ಲ, ವಯಸ್ಸಿನ ನಿರ್ಬಂಧವೂ ಇಲ್ಲ: ಸೌದಿ ಸಚಿವರ ಹೇಳಿಕೆ

Update: 2023-01-10 06:24 GMT

ರಿಯಾದ್: ಈ ವರ್ಷ ಹಜ್‌ (Haj) ಯಾತ್ರಾರ್ಥಿಗಳ ಸಂಖ್ಯೆಗೆ ಮಿತಿ ಹೇರುವುದಿಲ್ಲ ಎಂದು ಸೌದಿ ಸಚಿವರೊಬ್ಬರು ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಕೋವಿಡ್‌-19 (Covid19) ಸಾಂಕ್ರಾಮಿಕದಿಂದಾಗಿ ಹಜ್‌ ಯಾತ್ರಾರ್ಥಿಗಳ ಸಂಖ್ಯೆಗೆ ಮಿತಿ ಹೇರಲಾಗಿತ್ತು.

ಸಾಂಕ್ರಾಮಿಕಕ್ಕಿಂತ ಮುಂಚೆ ಇದ್ದಷ್ಟೇ ಈ ಬಾರಿ ಯಾತ್ರಾರ್ಥಿಗಳ ಸಂಖ್ಯೆ ಇರಲಿದೆ, ಯಾವುದೇ ವಯಸ್ಸಿನ ನಿರ್ಬಂಧವೂ ಇಲ್ಲ ಎಂದು ಹಜ್‌ ಮತ್ತು ಉಮ್ರಾ ಸಚಿವ ತೌಫೀಖ್‌ ಅಲ್‌ ರಬೀಅ ರಿಯಾದ್ ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

2019 ರಲ್ಲಿ ಸುಮಾರು 25 ಲಕ್ಷ  ಮಂದಿ ಹಜ್‌ ಯಾತ್ರೆ ಕೈಗೊಂಡಿದ್ದರೆ 2022 ರಲ್ಲಿ ಈ ಸಂಖ್ಯೆ 9 ಲಕ್ಷ ಆಗಿತ್ತು. ಈ 9 ಲಕ್ಷ ಮಂದಿಯಲ್ಲಿ ಸುಮಾರು 7.8 ಲಕ್ಷ ಮಂದಿ ಇತರ ದೇಶಗಳಿಂದ ಬಂದವರಾಗಿದ್ದರು. ಮೇಲಾಗಿ ಸಾಂಕ್ರಾಮಿಕದ ಸಂದರ್ಭ 65 ವರ್ಷಕ್ಕಿಂತ ಕಿರಿಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಅಷ್ಟೇ ಅಲ್ಲದೆ ಯಾತ್ರಾರ್ಥಿಗಳು ಕೋವಿಡ್‌ ಲಸಿಕೆ ಪಡೆದಿರಬೇಕು ಮತ್ತು ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿ ಹೊಂದಿರಬೇಕೆಂಬ ನಿರ್ಬಂಧಗಳೂ ಕಳೆದ ಮೂರು ವರ್ಷ ಇದ್ದವು.

ಇದನ್ನೂ ಓದಿ: ಬಿಸಿಯೂಟಕ್ಕೆ ಬಿದ್ದ ಹಾವು: ಹಲವಾರು ಶಾಲಾ ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

Similar News