ಧೋನಿ, ವಿರಾಟ್‌ ಪುತ್ರಿಯರ ವಿರುದ್ಧ ನಿಂದನಾತ್ಮಕ ಟ್ವೀಟ್‌ : ಕೇಸ್‌ ದಾಖಲಿಸಲು ಪೊಲೀಸರಿಗೆ ದಿಲ್ಲಿ ಮಹಿಳಾ ಆಯೋಗ ಸೂಚನೆ

Update: 2023-01-12 06:31 GMT

ಹೊಸದಿಲ್ಲಿ: ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ (Virat Kohli) ಹಾಗೂ ಎಂ ಎಸ್‌ ಧೋನಿ (MS Dhoni) ಅವರ ಪುತ್ರಿಯರ ಕುರಿತು ಆಕ್ಷೇಪಾರ್ಹ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸುವಂತೆ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್‌ (Swati Maliwal) ಅವರು ಪೊಲೀಸರಿಗೆ ಸೂಚಿಸಿದ್ದಾರೆ.

"ನಿಮಗೆ ಒಬ್ಬ ಕ್ರಿಕೆಟಿಗ ಇಷ್ಟವಿಲ್ಲವೆಂದಾದರೆ, ಅವರ ಪುತ್ರಿಯರನ್ನು ನಿಂದಿಸುವಿರಾ?" ಎಂದು ಪ್ರಶ್ನಿಸಿ ವಿರಾಟ್-ಅನುಷ್ಕಾ ದಂಪತಿ ಪುತ್ರಿ ವಮಿಕಾ ಹಾಗೂ ಧೋನಿ, ಸಾಕ್ಷಿ ದಂಪತಿಯ ಪುತ್ರಿ ಝಿವಾ ಅವರ ಕುರಿತು ಆಕ್ಷೇಪಾರ್ಹ ಟ್ವೀಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಸ್ವಾತಿ ಮಳಿವಾಲ್‌ ಶೇರ್‌ ಮಾಡಿದ್ದಾರೆ.

ವಿರಾಟ್‌ ಕೊಹ್ಲಿ ಪುತ್ರಿ ವಮಿಕಾಗೆ ಜನವರಿ 11 ರಂದು ಎರಡು ವರ್ಷ ತುಂಬಿದ್ದು ಈ ಸಂದರ್ಭ ಆಕ್ಷೇಪಾರ್ಹ ಟ್ವೀಟ್‌ ಮಾಡಲಾಗಿತ್ತು.

2021 ರಲ್ಲೂ ವಮಿಕಾ ಒಂಬತ್ತು ತಿಂಗಳು ಪ್ರಾಯದವಳಿರುವಾಗ ಆಕೆಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ಬೆದರಿಕೆಯೊಡ್ಡಿದ ಸಂಬಂಧ ದಿಲ್ಲಿ ಮಹಿಳಾ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿತ್ತು.

ಇದನ್ನೂ ಓದಿ: ವಿಐಪಿ ಹಜ್‌ ಕೋಟಾ ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧಾರ

Similar News