×
Ad

ಎಲ್‌ಪಿಜಿ ಸಿಲಿಂಡರ್ ಸ್ಫೋಟ: ಒಂದೇ ಕುಟುಂಬದ ಆರು ಮಂದಿ ಮೃತ್ಯು

Update: 2023-01-12 13:14 IST

ಹೊಸದಿಲ್ಲಿ: ಹರ್ಯಾಣದ ಪಾಣಿಪತ್‌ನ ತಹಸಿಲ್ ಕ್ಯಾಂಪ್ ಪ್ರದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು  ಒಂದೇ ಕುಟುಂಬದ ಆರು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮೃತರನ್ನು ಅಬ್ದುಲ್ ಕರೀಂ (48), ಅವರ ಪತ್ನಿ ಅಫ್ರೋಜ್ (45),  ಪುತ್ರಿಯರಾದ ಇಶ್ರತ್ (18), ರೇಷ್ಮಾ (16) ಹಾಗೂ  ಅಫ್ಸಾನಾ (8) ,  ಮಗ ಅಬ್ದುಶ್ ಶಕುರ್ (12) ಎಂದು ಗುರುತಿಸಲಾಗಿದೆ.

ಕರೀಂ ಅವರು ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರಾಗಿದ್ದರು ಹಾಗೂ ತನ್ನ ಕುಟುಂಬದೊಂದಿಗೆ ಒಂದೇ ಕೊಠಡಿಯ ಬಾಡಿಗೆ ಮನೆಯ ವಾಸಿಸುತ್ತಿದ್ದರು.

ಈ ಘಟನೆ ಬೆಳಗ್ಗೆ 6.30ಕ್ಕೆ ಅಡುಗೆ ಮಾಡುತ್ತಿದ್ದಾಗ ನಡೆದಿದೆ ಎಂದು ಪಾಣಿಪತ್ ಪೊಲೀಸ್ ಅಧೀಕ್ಷಕ ಶಶಾಂಕ್ ಕುಮಾರ್ ಸಾವನ್ ಹೇಳಿದ್ದಾರೆ.

ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ಕೆಲವೇ ನಿಮಿಷಗಳಲ್ಲಿ ಕೊಠಡಿ ಬೂದಿಯಾಗಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪಶ್ಚಿಮ ಬಂಗಾಳದಲ್ಲಿರುವ ಕರೀಂ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.

Similar News