ಸುಳ್ಳುಸುದ್ದಿ ಹರಡುವ ಆರೋಪದಲ್ಲಿ ಆರು ಯೂಟ್ಯೂಬ್ ಚಾನಲ್‌ಗಳ ನಿಷೇಧ ಸಾಧ್ಯತೆ: ಅಧಿಕಾರಿಗಳು

Update: 2023-01-13 02:49 GMT

ಹೊಸದಿಲ್ಲಿ: ಸುಮಾರು 20 ಲಕ್ಷ ಸಬ್‌ಸ್ಕ್ರೈಬರ್‌ಗಳಿಗೆ ಸುಳ್ಳು ಸುದ್ದಿ ಹರಡುವ ಮತ್ತು ಭಾರತ ವಿರೋಧಿ ಅಂಶಗಳನ್ನು ಪ್ರಸಾರ ಮಾಡುತ್ತಿರುವ ಆರೋಪದಲ್ಲಿ ಆರು ಯೂಟ್ಯೂಬ್ ಚಾನಲ್‌ಗಳ YouTube channels ವಿರುದ್ಧ ಕ್ರಮಕ್ಕೆ ಪ್ರೆಸ್ ಇನ್‌ಫರ್ಮೇಷನ್ ಬ್ಯೂರೊದ Press Information Bureau ಫ್ಯಾಕ್ಟ್ ಚೆಕ್ ವಿಭಾಗ ಮುಂದಾಗಿದೆ. ಸಚಿವಾಲಯ ಮಟ್ಟದ ಕ್ರಮಕ್ಕೆ ಹಾಗೂ ಮುಂದಿನ ಹಂತದಲ್ಲಿ ಈ ಚಾನಲ್‌ಗಳ ನಿಷೇಧಕ್ಕೆ ಶಿಫಾರಸ್ಸು ಮಾಡಲಾಗುತ್ತಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಆರು ಚಾನಲ್‌ಗಳು ಸುಳ್ಳುಸುದ್ದಿ ಹರಡುತ್ತಿವೆ ಎನ್ನುವುದನ್ನು ಕಳೆದ ತಿಂಗಳು ಪಿಐಬಿಯ ಸತ್ಯಶೋಧನಾ ಘಟಕ ಬಹಿರಂಗಪಡಿಸಿತ್ತು. ಇವುಗಳನ್ನು ರದ್ದುಪಡಿಸುವಂತೆ ಸರ್ಕಾರ ಆ ಬಳಿಕ ಯೂ-ಟ್ಯೂಬ್ ಸಾಮಾಜಿಕ ಜಾಲತಾಣ ಕಂಪನಿಯನ್ನು ಕೋರಿತ್ತು.

ಈ ಆರು ಚಾನಲ್‌ಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತಿದ್ದು, ಚುನಾವಣೆಗಳು, ಸುಪ್ರೀಂಕೋರ್ಟ್ Supreme Court ಮತ್ತು ಸಂಸತ್ ನಡವಳಿಕೆಗಳ ಬಗ್ಗೆ ಹಾಗೂ ಒಟ್ಟಾರೆ ಸರ್ಕಾರದ ಬಗ್ಗೆ ಸುಳ್ಳು ಸುದ್ದಿಯನ್ನು ಹರಡುತ್ತಿವೆ ಎಂದು ಅಧಿಕೃತ ಪ್ರಕಟಣೆ ಹೇಳಿದೆ.

ಸುಮಾರು 5.57 ಲಕ್ಷ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ನೇಷನ್ ಟಿವಿ, ಸಂವಾದ ಟಇವಿ (10.9 ಲಕ್ಷ ಗ್ರಾಹಕರು), ಸರೋಕಾರ್ ಭಾರತ್ (21100), ನೇಷನ್24 (25,400), ಸ್ವರ್ಣಿಮ್ ಭಾರತ್ (6079) ಮತ್ತು ಸಂವಾದ ಸಮಾಚಾರ (3.46 ಲಕ್ಷ) ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.

Similar News