ಶತಾಯುಷಿ ಸಂಕಿಯಜ್ಜಿ ನಿಧನ

Update: 2023-01-16 16:40 GMT

ಕುಂದಾಪುರ: ಸುಮಾರು 102 ವರ್ಷ ವಯಸ್ಸಿನ ಬ್ರಹ್ಮಾವರ ತಾಲೂಕಿನ ನೈಲಾಡಿ ಸಂಪಿಕಟ್ಟೆ ಮನೆಯ ಶತಾಯುಷಿ ಸಂಕಿಯಜ್ಜಿ ಜ.16 ಸೋಮವಾರ ಸ್ವಗೃಹದಲ್ಲಿ ನಿಧನರಾದರು.

5 ತಲೆಮಾರುಗಳನ್ನು ಕಂಡ ಸಂಕಿಯಜ್ಜಿ 8 ಮಂದಿ ಮಕ್ಕಳು, ನಾಲ್ವರು ಅಳಿಯಂದಿರು, ಮೂವರು ಸೊಸೆಯರು, 33 ಮಂದಿ ಮೊಮ್ಮಕ್ಕಳು, 20 ಮರಿ ಮಕ್ಕಳು, ಓರ್ವ ಮರಿ ಮಗಳ ಮಗಳು ಸಹಿತ ಅಪಾರ ಬಂಧು ಭಾಂದವರನ್ನು ಅಗಲಿದ್ದಾರೆ.

ಕರಾವಳಿಯ ನಿರೂಪಕ, ಕಲಾವಿದ ಚೇತನ್ ನೈಲಾಡಿ ಸಂಕಿಯಜ್ಜಿಯವರ ಮರಿಮೊಮ್ಮಗ. ಇವರಿಬ್ಬರ ’ಹಳಿ ಹಂಬ್ಲ್’(ಹಳೆಯ ನೆನಪು) ಎಂಬ ಕುಂದಾಪುರ ಕನ್ನಡದ ಸಂದರ್ಶನ ಭೂಮಿಕೆಯಲ್ಲಿ ಸಂಕಿಯಜ್ಜಿ ತಮ್ಮ ಹಳೆ ಜೀವನ ಶೈಲಿಯ ನೆನಪುಗಳನ್ನು ತೆರೆದಿಟ್ಟಿದ್ದರು.

Similar News