ಮೊದಲ ಏಕದಿನ: ಬ್ರೆಸ್‌ವೆಲ್ ಶತಕ ವ್ಯರ್ಥ; ನ್ಯೂಝಿಲ್ಯಾಂಡ್ ವಿರುದ್ಧ ಭಾರತಕ್ಕೆ ರೋಚಕ ಜಯ

Update: 2023-01-18 16:33 GMT

 ಹೈದರಾಬಾದ್, ಜ.18: ಮಿಚೆಲ್ ಬ್ರೆಸ್‌ವೆಲ್ ಭರ್ಜರಿ ಶತಕ(140 ರನ್,78 ಎಸೆತ)ಹಾಗೂ ಮಿಚೆಲ್ ಸ್ಯಾಂಟ್ನರ್ ಅರ್ಧಶತಕ(57 ರನ್, 45 ಎಸೆತ)ಹೊರತಾಗಿಯೂ ಭಾರತ ಕ್ರಿಕೆಟ್ ತಂಡ ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು 12 ರನ್ ಅಂತರದಿಂದ ರೋಚಕವಾಗಿ ಗೆದ್ದುಕೊಂಡಿದೆ.

ಬುಧವಾರ ನಡೆದ ಪಂದ್ಯದಲ್ಲಿ ಗೆಲ್ಲಲು 350 ರನ್ ಗುರಿ ಪಡೆದಿದ್ದ ನ್ಯೂಝಿಲ್ಯಾಂಡ್ 49.2 ಓವರ್‌ಗಳಲ್ಲಿ 337 ರನ್ ಗಳಿಸಿ ಆಲೌಟಾಯಿತು.

ಭಾರತದ ಪರ ಮುಹಮ್ಮದ್ ಸಿರಾಜ್(4-46) ಯಶಸ್ವಿ ಬೌಲರ್ ಎನಿಸಿಕೊಂಡರು. ಕುಲದೀಪ್ ಯಾದವ್(2-43) ಹಾಗೂ ಶಾರ್ದೂಲ್ ಠಾಕೂರ್(2-54)ತಲಾ ಎರಡು ವಿಕೆಟ್‌ಗಳನ್ನು ಪಡೆದರು.
   
ಭಾರತ 349/8: ಇದಕ್ಕೂ ಮೊದಲು ಭಾರತ ತಂಡ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿತು. ಭಾರತದ ಪರ ಗಿಲ್ 147 ಎಸೆತಗಳಲ್ಲಿ 19 ಬೌಂಡರಿ ಹಾಗೂ 9 ಸಿಕ್ಸರ್ ಗಳ ಸಹಾಯದಿಂದ 208 ರನ್ ಗಳಿಸಿ ಏಕಾಂಗಿ ಹೋರಾಟ ನೀಡಿದರು. ರೋಹಿತ್ ಶರ್ಮಾ(34 ರನ್, 38 ಎಸೆತ), ಸೂರ್ಯಕುಮಾರ್ ಯಾದವ್(31 ರನ್), ಹಾರ್ದಿಕ್‌ಪಾಂಡ್ಯ(28 ರನ್)ಎರಡಂಕೆಯ ಸ್ಕೋರ್ ಗಳಿಸಿದರು.

ಗಿಲ್ ಅವರು ನಾಯಕ ರೋಹಿತ್ ಅವರೊಂದಿಗೆ ಮೊದಲ ವಿಕೆಟಿಗೆ 60 ರನ್ ಜೊತೆಯಾಟ ನಡೆಸಿದರು. ನ್ಯೂಝಿಲ್ಯಾಂಡ್ ಪರ ಡರ್ಲ್ ಮಿಚೆಲ್ (2-30) ಹಾಗೂ ಹೆನ್ರಿ ಶಿಪ್ಲೆ(2-74) ತಲಾ ಎರಡು ವಿಕೆಟ್‌ಗಳನ್ನು ಪಡೆದು ಯಶಸ್ವಿ ಬೌಲರ್‌ಎ ನಿಸಿಕೊಂಡರು.
 

Similar News