ಜಗತ್ತು ಇಂದು ‘‘ದಯನೀಯ ಸ್ಥಿತಿ’’ಯಲ್ಲಿದೆ: ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್

Update: 2023-01-18 17:10 GMT

ಡಾವೋಸ್ (ಸ್ವಿಜರ್ಲ್ಯಾಂಡ್), ಜ. 18: ಹವಾಮಾನ ಬದಲಾವಣೆ ಮತ್ತು ಉಕ್ರೇನ್ ಮೇಲೆ ರಶ್ಯ ನಡೆಸುತ್ತಿರುವ ಯುದ್ಧ ಸೇರಿದಂತೆ ಪರಸ್ಪರ ಸಂಬಂಧ ಹೊಂದಿರುವ ಹಲವಾರು ಸವಾಲುಗಳಿಂದಾಗಿ ಜಗತ್ತು ಇಂದು ‘‘ದಯನೀಯ ಸ್ಥಿತಿ’’ಯಲ್ಲಿದೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ (António Guterres)ಬುಧವಾರ ಹೇಳಿದ್ದಾರೆ.

ಅವರು ಸ್ವಿಟ್ಸರ್ಲ್ಯಾಂಡ್ನ ಡಾವೋಸ್ ನಗರದಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನದ ಎರಡನೇ ದಿನದಂದು ಮಾಡಿದ ಭಾಷಣದಲ್ಲಿ ಈ ವಿಷಾದಕರ ಸಂದೇಶವನ್ನು ನೀಡಿದ್ದಾರೆ.

ಉಕ್ರೇನ್ ನಲ್ಲಿ ನಡೆದ ಹೆಲಿಕಾಪ್ಟರ್ ಪತನದಲ್ಲಿ ದೇಶದ ಆಂತರಿಕ ಭದ್ರತಾ ಸಚಿವ ಮತ್ತು ಇತರ ಅಧಿಕಾರಿಗಳು ಸೇರಿದಂತೆ 18 ಮಂದಿ ಮೃತಪಟ್ಟ ಸುದ್ದಿ ಕೇಳಿಬಂದಾಗ ಅಧಿವೇಶನವನ್ನು ಸೂತಕದ ಛಾಯೆ ಆವರಿಸಿತು.

ಮೃತರಿಗಾಗಿ 15 ಸೆಕೆಂಡ್ ಗಳ ಮೌನ ಆಚರಿಸಲು ವೇದಿಕೆ ಅಧ್ಯಕ್ಷ ಬೋರ್ಜ್ ಬ್ರೆಂಡ್ ಮನವಿ ಮಾಡಿದರು. ‘‘ಇದು ಇನ್ನೊಂದು ಅತ್ಯಂತ ದುರಂತದ ದಿನ’’ ಎಂದು ಉಪಸ್ಥಿತರಿದ್ದ ಉಕ್ರೇನ್ನ ಪ್ರಥಮ ಮಹಿಳೆ ಒಲೇನಾ ಝೆಲೆನ್ಸ್ಕ ಕಣ್ಣೀರು ಒರೆಸುತ್ತಾ ಹೇಳಿದರು.

Similar News